ಅಲಹಾಬಾದ್: ಉತ್ತರ ಪ್ರದೇಶದ ಅಲಹಾಬಾದ್ ನ ಶಾಲೆಯೊಂದರಲ್ಲಿ ರಾಷ್ಟ್ರಗೀತೆಯನ್ನು ನಿಷೇಧಿಸಿರುವ ಅಘಾತಕಾರಿ ಘಟನೆ ನಡೆದಿದೆ.
ಶಾಲೆಯಲ್ಲಿ ಮಾತ್ರವಲ್ಲದೇ ಶಾಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ರಾಷ್ಟ್ರಗೀತೆಯನ್ನು ನಿಷೇಧಿಸಲಾಗಿದ್ದು, ರಾಷ್ಟ್ರಗೀತೆಯಲ್ಲಿರುವ ಭಾರತ ಭಾಗ್ಯವಿಧಾತ ಎಂಬ ಸಾಲುಗಳು ಇಸ್ಲಾಮ್ ಗೆ ವಿರುದ್ಧವಾಗಿದೆ ಎಂಬ ಕಾರಣದಿಂದಾಗಿ ಉತ್ತರ ಪ್ರದೇಶದ ಅಲಹಾಬಾದ್ ನ ಎಂಎ ಕಾನ್ವೆಂಟ್ ಶಾಲೆಯಲ್ಲಿ ರಾಷ್ಟ್ರಗೀತೆಯನ್ನು ನಿಷೇಧಿಸಲಾಗಿದೆ. ಎಂಎ ಕಾನ್ವೆಂಟ್ ಶಾಲೆಯಲ್ಲಿ ರಾಷ್ಟ್ರಗೀತೆಯನ್ನು ನಿಷೇಧಿಸಿರುವ ಕ್ರಮವನ್ನು ಬಿಜೆಪಿ ನಾಯಕ ಶ್ರೀಕಾಂತ್ ಶರ್ಮಾ ಖಂಡಿಸಿದ್ದಾರೆ.