ಅರುಣ್ ಜೇಟ್ಲಿ 
ದೇಶ

ಲೋಕಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡನೆ, ಚರ್ಚೆ

ಳೆದ ವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಸರಕು ಮತ್ತು ಸೇವಾ ತೆರಿಗೆಯ(ಜಿಎಸ್‌ಟಿ) ಮಸೂದೆಯನ್ನು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ...

ನವದೆಹಲಿ: ಕಳೆದ ವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಸರಕು ಮತ್ತು ಸೇವಾ ತೆರಿಗೆಯ(ಜಿಎಸ್‌ಟಿ) ಮಸೂದೆಯನ್ನು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು. ಆದರೆ ಕೆಳಮನೆಯನ್ನು ಕಿರಿಯ ಪಾರ್ಟನರ್ ಎಂದು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಜಿಎಸ್ ಟಿ ಮಸೂದೆ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಕಾಂಗ್ರೆಸ್ ಸಂಸದ ಎಂ.ವೀರಪ್ಪ ಮೊಯ್ಲಿ ಅವರು, ಜಿಎಸ್ ಟಿ ಮಸೂದೆಗೆ ಸಂಬಂಧಿಸಿದಂತೆ ಸಮಾಲೋಚನೆ ವೇಳೆ ಕೇವಲ ರಾಜ್ಯಸಭಾ ಸದಸ್ಯರನ್ನು ಮಾತ್ರ ಪರಿಗಣಿಸಲಾಗಿದೆ. ಏಕೆ ಕೆಳಮನೆ ಸದಸ್ಯರಿಗೆ ಬುದ್ಧಿವಂತರಲ್ಲವೇ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ಅಂದರೆ ಬರೀ ಬಹುಮತ ಅಲ್ಲ. ಜಿಎಸ್ ಟಿ ಮಸೂದೆಯನ್ನು ಸಂಸತ್ ಜಂಟಿ ಸಮಿತಿಯ ಪರಿಶೀಲನೆಗೆ ಕಳುಹಿಸುವಂತೆ ನಾವು ನೀಡಿದ್ದ ಸಲಹೆಯನ್ನು ನೀವು ತಿರಸ್ಕರಿಸಿದ್ದೀರಿ ಎಂದು ಮೊಯ್ಲಿ ಹೇಳಿದರು.
ಜಿಎಸ್ ಟಿಯನ್ನು ಕಾಂಗ್ರೆಸ್ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಆದರೆ ಜಿಎಸ್ ಟಿ ಮಸೂದೆ ಬದಲಾವಣೆ ತರುತ್ತೆ ಅಂತ ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.
ಮಸೂದೆ ಮಂಡಿಸಿ ಮಾತನಾಡಿದ ಜೇಟ್ಲಿ, ಜಿಎಸ್‌ಟಿ ಮಸೂದೆಯು ಅಧಿಕಾರ ಕೊಡುವ ಮಸೂದೆಯಾಗಿದ್ದು ಇದಕ್ಕೆ ಪೂರಕವಾಗಿ ಇನ್ನೂ ಮೂರು ಕಾನೂನುಗಳನ್ನು ರೂಪಿಸಬೇಕಾಗಿದೆ, ಈ ಪೈಕಿ ಎರಡನ್ನು ಸಂಸತ್ತಿನಲ್ಲೇ ಪಾಸು ಮಾಡಬೇಕಾಗಿದೆ ಎಂದು ಹೇಳಿದರು. 
2015ರ ಮೇ ತಿಂಗಳಲ್ಲೇ ಲೋಕಸಭೆಯಲ್ಲಿ ಜಿಎಸ್‌ಟಿ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಪಾಸು ಮಾಡಲಾಗಿತ್ತು. ಆದರೆ ಅಲ್ಲಿಂದ ಮುಂದೆ ರಾಜ್ಯಸಭೆಯಲ್ಲಿ ಈ ಮಸೂದೆಯು ಕಳೆದ ವಾರದಲ್ಲಷ್ಟೇ ಪಾಸಾಗಿತ್ತು ಮತ್ತು ಅದಕ್ಕೆ ಮುನ್ನ ಕೆಲವು ಪ್ರತ್ಯೇಕ ತಿದ್ದುಪಡಿಗಳನ್ನು ಕೂಡ ಮಾಡಲಾಗಿತ್ತು. 
ಇದೇ ವೇಳೆ ಜಿಎಸ್‌ಟಿ ದರ ಅಥವಾ ತೆರಿಗೆ ದರ ನಿರ್ಣಯಕ್ಕೆ ಜಿಎಸ್‌ಟಿ ಮಂಡಳಿಯೊಂದನ್ನು ರಚಿಸಲಾಗುವುದು ಎಂದು ಜೇಟ್ಲಿ  ಹೇಳಿದ್ದಾರೆ. ಮತ್ತು ಆ ಮೂಲಕ ಜಿಎಸ್‌ಟಿಯು ಜಾರಿಗೆ ಬರುವ ಮುನ್ನ ಸುದೀರ್ಘ‌ ಪ್ರಕ್ರಿಯೆಗಳನ್ನು ಮುಗಿಸಬೇಕಾಗಿದೆ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!