ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಮತ್ತು ಫೋಟೋ ಬಳಸಿ ಸಿಆರ್ ಪಿಎಫ್ ನೌಕರಿಗೆ ವ್ಯಕ್ತಿಯೊಬ್ಬ ಅರ್ಜಿ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸಿಆರ್ ಪಿಎಫ್ ನೇಮಕಾತಿ ಗೆ ಆನ್ ಲೈನ್ ನಲ್ಲಿ ಆರ್ಜಿ ಕರೆಯಲಾಗಿತ್ತು. ಈ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ ಮೋದಿ ಅವರ ಫೋಟೋ ಹಾಗೂ ಹೆಸರಿನಲ್ಲಿ ಆನ್ ಲೈನ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ಈ ಸಂಬಂಧ ಕೇಂದ್ರ ಅರೆಸೇನಾ ಪಡೆ, ಸೈಬರ್ ಅಪರಾಧ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದೆ. ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ದಳದ ಸೈಬರ್ ಕ್ರೈಂ ಘಟಕ ಪ್ರಕರಣದ ತನಿಖೆ ನಡೆಸುತ್ತಿದೆ.