ದೀವಾಂಶ್ ಜೈನ್ 
ದೇಶ

ಮೋದಿ ಅಂಕಲ್, ನನ್ನ ಶಾಲೆಗಿಂತ ನಿಮ್ಮ ರ್ಯಾಲಿಯೇ ಹೆಚ್ಚಾಯ್ತೇ?

ಮೋದಿ ಅಂಕಲ್, ನಿಮಗೆ ನನ್ನ ಶಾಲೆಗಿಂತ ನಿಮ್ಮ ರ್ಯಾಲಿಯೇ ಹೆಚ್ಚಾಯಿತೆ ಎಂದು ಪ್ರಶ್ನಿಸಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ...

ಖಾಂದ್ವಾ: ಮೋದಿ ಅಂಕಲ್, ನಿಮಗೆ ನನ್ನ ಶಾಲೆಗಿಂತ ನಿಮ್ಮ ರ್ಯಾಲಿಯೇ ಹೆಚ್ಚಾಯಿತೆ ಎಂದು ಪ್ರಶ್ನಿಸಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.

ಸ್ವಾತಂತ್ರ್ಯ ಚಳವಳಿಯ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ್ ಆಜಾದ್ ಹುಟ್ಟೂರು, ಮಧ್ಯಪ್ರದೇಶದ ಬಾಬ್ರಾಗೆ ಪ್ರಧಾನಿ ಮೋದಿ ಇಂದು ಭೇಟಿ ನೀಡಿ, ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.

ರ್ಯಾಲಿಗೆ ಜನಗಳನ್ನು ಕರೆತರಲು ಹೆಚ್ಚಿನ ವಾಹನಗಳ ಅವಶ್ಯಕತೆಯಿದ್ದು, ರ್ಯಾಲಿಗಾಗಿ ಎಲ್ಲಾ ವಾಹನಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿಡ ನಿರ್ಧರಿಸಿ, ವಾಹನಗಳನ್ನು ಪಡೆದುಕೊಂಡಿದೆ.

ಮೋದಿ ರ್ಯಾಲಿಗಾಗಿ ಎಲ್ಲಾ ವಾಹನಗಳು ತೆರಳುವ ಹಿನ್ನೆಲೆಯಲ್ಲಿ ಆಗಸ್ಟ್  9 ಮತ್ತು 10 ರಂದು ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಶಾಲೆಯ ಶಿಕ್ಷಕರು ಖಾಂದ್ವಾದಲ್ಲಿರುವ ವಿದ್ಯಾಕುಂಜ್ ಶಾಲೆಯ ವಿದ್ಯಾರ್ಥಿ ದಿವಾಂಶ್ ಜೈನ್ ಗೆ ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ದಿವಾಂಶ್ ಜೈನ್ ಪ್ರಧಾನಿ ನರೇಂದ್ರ ಮೋದಿ ಅವರ ವಿಳಾಸಕ್ಕೆ ಪತ್ರ ಬರೆದಿದ್ದಾನೆ.

ಮೋದಿ ಅಂಕಲ್, ನಿಮ್ಮ ಸಭೆ ನನ್ನ ಶಾಲೆಗಿಂತ ಹೆಚ್ಚು ಮುಖ್ಯನಾ? ನೀವು ಅಮೆರಿಕಾದಲ್ಲಿ ಮಾಡಿದ ಭಾಷಣ ನಾನು ಕೇಳಿದ್ದೇನೆ, ಅಲ್ಲಿ ಸಾವಿರಾರು ಜನ ನಿಮ್ಮ ಭಾಷಣ ಕೇಳಲಲು ಬಂದಿದ್ದರು, ಅವರೆಲ್ಲಾ ಶಾಲಾ ವಾಹನಗಳನ್ನು ಬಳಸಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರಾ ಎಂದು ಪ್ರಶ್ನಿಸಿದ್ದಾನೆ.

ದೀವಾಂಶ್ ಜೈನ್ ಪ್ರಧಾನಿ ಮೋದಿ ಅವರ ಅಭಿಮಾನಿಯಾಗಿದ್ದು, ಎಲ್ಲಾ ಮನ್ ಕೀ ಬಾತ್ ಗಳನ್ನು ಕೇಳಿಸಿಕೊಂಡಿದ್ದಾನಂತೆ. ವಿದ್ಯಾರ್ಥಿಯ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಮೋದಿ ರ್ಯಾಲಿಗೆ ಶಾಲಾ ಬಸ್ ಗಳನ್ನು ಬಳಸಿಕೊಳ್ಳದಂತೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ