ಲಖನೌ: ದಲಿತರೆಂಬ ಕಾರಣಕ್ಕೆ ದೇವಾಲಯದೊಳಗೆ ಪ್ರವೇಶಿಸಿದ ತಂದೆ-ಮಗಳ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಸಾಂಬಾಲ್ ಜಿಲ್ಲೆಯಲ್ಲಿ ನಡೆದಿದೆ.
ದೇವಾಲಯದ ಬಳಿ ಇರುವ ಒತ್ತುವ ಬೋರ್ ವೆಲ್ ನಲ್ಲಿ ದಲಿತ ಬಾಲಕಿಯೊಬ್ಬಳು ನೀರು ಕುಡಿಯುತ್ತಿದ್ದದ್ದನ್ನು ಪೂಜಾರಿ ತಡೆಗಟ್ಟಿದ ನಂತರ ಈ ಘಟನೆ ನಡೆದಿದೆ. ನೀರು ಕುಡಿಯುತ್ತಿದ್ದ ಮಗಳನ್ನು ತಡೆಗಟ್ಟಿದ್ದನ್ನು ಪ್ರಶ್ನಿಸಿದ ತಂದೆಯ ಮೇಲೆ ಹಲ್ಲೆ ನಡೆಸಲಾಗಿದ್ದು ಪೊಲೀಸರು ದಲಿತರ ಮೇಲೆ ದೌರ್ಜನ್ಯ ನಡೆಸಿರುವ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೌರ್ಜನ್ಯ ನಡೆಸಿದ ಆರೋಪದಡಿ ದೇವಾಲಯದ ಅರ್ಚಕನನ್ನು ಬಂಧಿಸಲಾಗಿದ್ದು, ಗುಜರಾತ್ ನ ನಂತರ ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ.