ಲಂಡನ್: ಈ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಾನು ಏನೇ ಹೇಳಿದರು ಅದು ಸಮಸ್ಯಾತ್ಮಕವಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಅವರು ಹೇಳಿದ್ದಾರೆ.
ಬಿಬಿಸಿ ಸಂದರ್ಶನದ ವೇಳೆ ರಾಜನ್ ರನ್ನು ಮೋದಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಬಗ್ಗೆ ಕೇಳಿದಾಗ ಅವರು, ನಾನು ಈ ಪ್ರಶ್ನೆಗೆ ಉತ್ತರಿಸಲಾರೆ. ನಾನು ಏನೇ ಹೇಳಿದರೂ ಅದು ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು. ಹೀಗಾಗಿ ನಾನು ಈ ಪ್ರಶ್ನೆಗೆ ಉತ್ತರಿಸದೆ ಇರಲು ಇಷ್ಟಪಡುತ್ತೇನೆ ಎಂದು ರಾಜನ್ ಪ್ರತಿಕ್ರಿಯಿಸಿದ್ದಾರೆ.
ರಾಜನ್ ಅವರ ನೇರ ನುಡಿಗಳು ಕೇಂದ್ರ ಸರ್ಕಾರದ ಪಾಲಿಗೆ ಸಾಕಷ್ಟು ಇರಿಸುಮುರಿಸು ಉಂಟು ಮಾಡಿದ್ದವು. ಇನ್ನು ರಾಜಕೀಯ ಪ್ರವೇಶ ಕುರಿತಂತೆ ಪ್ರಶ್ನಿಸಿದಾಗ ತಾವು ಎಂದಿಗೂ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿಯ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ರಾಜನ್ ಹೇಳಿದ್ದಾರೆ.
ರಾಜಕೀಯ ಪ್ರವೇಶ ನನ್ನ ಪತ್ನಿಗೂ ಇಷ್ಟವಿಲ್ಲ ಎನಿಸುತ್ತದೆ. ಈಗಿರುವಾಗ ನಾನು ರಾಜಕೀಯ ಪ್ರವೇಶ ಮಾಡಲಾರೆ. ಸದ್ಯಕ್ಕೆ ಭಾರತದ ಅತ್ಯಂತ ಅಪೇಕ್ಷಿತ ವ್ಯಕ್ತಿ ಆಗಿರುವುದಕ್ಕೆ ನಿಮಗೆ ಏನು ಅನಿಸುತ್ತದೆ ಎನ್ನು ಪ್ರಶ್ನೆಗೆ ನಾನು 25 ವರ್ಷದವನಿದ್ದಾಗ ಇಂತಹ ಬೇಡಿಕೆ ವ್ಯಕ್ತವಾಗಿದ್ದರೆ ಚೆನ್ನಾಗಿರುತ್ತಿತ್ತು 53 ವರ್ಷ ಹೆಚ್ಚಾಯಿತೇನೋ ಎಂದು ಉತ್ತರಿಸಿದರು.