ದೇಶ

'ಗುಜರಾತ್ ಮಾದರಿ' ಹೆಸರಲ್ಲಿ ದೇಶದ ಜನರನ್ನು ಮೂರ್ಖರನ್ನಾಗಿಸಲಾಗಿದೆ: ಕನ್ನಯ್ಯ ಕುಮಾರ್

Shilpa D

ಅಹಮದಾಬಾದ್: ಗುಜರಾತ್ ಮಾದರಿಯಲ್ಲಿ ಇಡಿ ದೇಶವನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳು ಮೂಲಕ ಇಡೀ ದೇಶದ ಜನರನ್ನು ಮೂರ್ಖರನ್ನಾಗಿಸಲಾಗಿದೆ ಎಂದು ಜೆಎನ್ ಯು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಕನ್ನಯ್ಯ ಕುಮಾರ್ ಸಂಘಪರಿವಾರ ಮತ್ತು ಮುನುವಾದಿ ತತ್ವ ಸಿದ್ಧಾಂತಗಳು ಪ್ರಜಾ ಪ್ರಭುತ್ವಕ್ಕೆ ಧ್ವನಿಯನ್ನು  ಹತ್ತಿಕ್ಕಲು ಯತ್ನ ನಡೆಸುತ್ತಿವೆ ಎಂದು ದೂರಿದ್ದಾರೆ

ಸ್ವತಂತ್ರ್ಯ ದಿನಾಚರಣೆ ಪ್ರಯುಕ್ತ ಗಿರ್ ಸೋಮನಾಥ ಜಿಲ್ಲೆಯಲ್ಲಿರುವ ಉನಾ ಗೆ ಭೇಟಿ ನೀಡಿದ್ದ ಕನ್ನಯ್ಯ ಕುಮಾರ್ ಮೊಟ್ಟ ಮೊದಲ ಬಾರಿಗೆ ತಾವು ಗುಜರಾತ್ ಗೆ ಭೇಟಿ ನೀಡಿರುವುದಾಗಿ ಹೇಳಿದರು.

ಉನಾದಲ್ಲಿ ನಡೆದ ದಲಿತ ಯಾತ್ರದಲ್ಲಿ ಪಾಲ್ಗೊಂಡು ಮಾತನಾಡಿದ ಕನ್ನಯ್ಯ ಗುಜರಾತ್ ಗೆ ಬಂದ ಮೇಲೆ ನನಗೆ ಸತ್ಯದ ಅರಿವಾಯಿತು. ಗುಜರಾತ್ ಮಾದರಿ ಹೆಸರಲ್ಲಿ ದೇಶದ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶ ದ್ರೋಹ ಆರೋಪದ ಮೇಲೆ ಬಂಧಿತರಾಗಿದ್ದ ಕನ್ನಯ್ಯ ಕುಮಾರ್ ಗೆ ಗುಜರಾತ್ ನ ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲು ಅಲ್ಲಿನ ಸರ್ಕಾರ ಅವಕಾಶ ಮಾಡಿಕೊಟ್ಟಿರಲಿಲ್ಲ. ನಂತರ ಸರ್ಕ್ಯೂಟ್ ಹೌಸ್ ನ ಹೊರಗೆ ಕನ್ನಯ್ಯ ಕುಮಾರ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.

SCROLL FOR NEXT