ರಿಷಿರಾಜ್‌ ಸಿಂಗ್‌ 
ದೇಶ

ಮಹಿಳೆಯನ್ನು 14 ಸೆಕೆಂಡ್ಸ್ ದಿಟ್ಟಿಸಿ ನೋಡಿದ್ರೂ ಜೈಲು!

ಮಹಿಳೆಯೊಬ್ಬರನ್ನು ಹದಿನಾಲ್ಕು ಸೆಕೆಂಡುಗಳ ಕಾಲ ಎವೆಯಿಕ್ಕದೆ ದಿಟ್ಟಿಸಿ ನೋಡಿದರೂ ಅವರ ವಿರುದ್ಧ ಕೇಸ್ ದಾಖಲಿಸಬಹುದು...

ತಿರುವನಂತಪುರ: ಮಹಿಳೆಯೊಬ್ಬರನ್ನು ಹದಿನಾಲ್ಕು ಸೆಕೆಂಡುಗಳ ಕಾಲ ಎವೆಯಿಕ್ಕದೆ ದಿಟ್ಟಿಸಿ ನೋಡಿದರೂ ಅವರ ವಿರುದ್ಧ ಕೇಸ್ ದಾಖಲಿಸಬಹುದು ಎಂದು ಕೇರಳ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಿಳೆಯನ್ನು ದಿಟ್ಟಿಸಿ ನೋಡಿದವರ ವಿರುದ್ಧವೂ ಕೇಸ್ ದಾಖಲಿಸುವಂತಹ ಅವಕಾಶಗಳು ಕಾನೂನಿನಲ್ಲಿದ್ದು, ಒಂದು ವೇಳೆ ನೀವು ಅಂತಹ ಕಿರುಕುಳಕ್ಕೆ ಒಳಗಾದರೆ ದಯವಿಟ್ಟು ಅದನ್ನು ಬಳಸಿ ಎಂದು ಕೇರಳದ ಅಬಕಾರಿ ಆಯುಕ್ತ ರಿಷಿರಾಜ್‌ ಸಿಂಗ್‌ ಅವರು ಹೇಳಿದ್ದಾರೆ.
ಕೊಚ್ಚಿಯಲ್ಲಿ ಮಹಿಳೆಯರ ರಕ್ಷಣೆ ಕುರಿತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಂಗ್ ಮಹಿಳೆಯರನ್ನು ದಿಟ್ಟಿಸಿ ನೋಡುವುದು ಸಹ ಕಿರುಕುಳ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ರಿಷಿರಾಜ್‌ ಸಿಂಗ್‌ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದೆ. ಅಲ್ಲದೆ ಕೇರಳದ ಕ್ರೀಡಾ ಸಚಿವ ಇ ಪಿ ಜಯರಾಜನ್‌ ಅವರು 'ಇದು ಕಿರಿಕಿರಿಯ ಹೇಳಿಕೆ' ಎಂದು  ಮೂದಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ