ಶಹಜಾನ್ಪುರ್(ಉತ್ತರಪ್ರದೇಶ): ಅಲ್ಲಗಾಂಜ್ ಎಂಬಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು ಮೊಬೈಲ್ ಗಾಗಿ ಮಹಿಳೆಯನ್ನು ಬಡಿದು ಕೊಳ್ಳಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಗಿರ್ಧಾರಿನಗರ ಗ್ರಾಮದಲ್ಲಿ 30 ವರ್ಷದ ಕುಸುಮ ದೇವಿ ಅವರನ್ನು ಭಾನುವಾರ ರಾತ್ರಿ ಸಂಜೀವ್, ರಾಜೀವ್ ಮತ್ತು ಬ್ಯಾಬ್ಲೋ ಎಂಬುವರು ಮೊಬೈಲ್ ಗಾಗಿ ಬಡಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕುಸುಮ ದೇವಿ ಪತ್ನಿ ಹೆದರಿ ಅದೇ ದಿನ ರಾತ್ರಿ ಮನೆ ಬಿಟ್ಟು ಹೋಗಿದ್ದು, ನಿನ್ನೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕುಸುಮ ದೇವಿ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.