ಸಾಂದರ್ಭಿಕ ಚಿತ್ರ 
ದೇಶ

ಮಾಹಿತಿ, ಸಂವಹನ ತಂತ್ರಜ್ಞಾನ ರಫ್ತಿನಲ್ಲಿ ವಿಶ್ವದಲ್ಲಿ ಭಾರತಕ್ಕೆ ಅಗ್ರ ಸ್ಥಾನ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ರಫ್ತಿನಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆಯ...

ಯುನೈಟೆಡ್ ನೇಶನ್: ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ರಫ್ತಿನಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. 
ಇತ್ತೇಚೆಗೆ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ(ಡಬ್ಲ್ಟುಐಪಿಒ) ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ) ಸಹಭಾಗಿತ್ವದೊಂದಿಗೆ ಜಿನಿವಾದಲ್ಲಿ ಬಿಡುಗಡೆ ಮಾಡಿದ ಇತ್ತೀಚಿನ ಗ್ಲೋಬಲ್ ಇನೋವೇಷನ್ ಸೂಚ್ಯಂಕ(ಜಿಐಐ)ಯಲ್ಲಿ ಭಾರತ ಈ ವರ್ಷ ಮಾಹಿತಿ, ಸಂವಹನ ತಂತ್ರಜ್ಞಾನ ರಫ್ತಿನಲ್ಲಿ ಕಳೆದ ವರ್ಷಕ್ಕಿಂತ 14 ಸ್ಥಾನಗಳ ಏರಿಕೆ ಕಂಡು 61ನೇ ಸ್ಥಾನಕ್ಕೇರಿದೆ. ಕಳೆದ ವರ್ಷ 85ನೇ ಸ್ಥಾನದಲ್ಲಿತ್ತು.
ವಿಜ್ಞಾನ ಮತ್ತು ಇಂಜಿನಿಯರಿಂಗ್ ನಲ್ಲಿ ಪದವೀಧರರನ್ನು ತಯಾರು ಮಾಡುವಲ್ಲಿ ಭಾರತ ವಿಶ್ವದಲ್ಲಿ 8ನೇ ಸ್ಥಾನದಲ್ಲಿದ್ದು, ಮಾನವ ಸಂಪನ್ಮೂಲ ಮತ್ತು ಸಂಶೋಧನೆಯಲ್ಲಿ ವಿಶ್ವದಲ್ಲಿ 63ನೆಯ ಸ್ಥಾನಕ್ಕೇರಿ ಮಹತ್ವದ ಸಾಧನೆ ಮಾಡಿದೆ.
ಡಬ್ಲ್ಯುಐಪಿಒ, ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದ್ದು, ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಇನ್ಸಿಯಾಡ್(ಅಂತಾರಾಷ್ಟ್ರೀಯ ಬ್ಯುಸಿನೆಸ್ ಸ್ಕೂಲ್) ಜೊತೆ 9ನೇ ಸೂಚ್ಯಂಕವನ್ನು ತಯಾರು ಮಾಡಲು ಕೆಲಸ ಮಾಡಿದೆ.
ಭಾರತದ ಮಿತವ್ಯಯ ಮತ್ತು ಸಂರಕ್ಷಣೆ ಜಾಗತಿಕ ಮಾರುಕಟ್ಟೆಯನ್ನು ಹಿಡಿಯಲು ಸಹಾಯವಾಗುತ್ತದೆ. ಇದಕ್ಕಾಗಿ ಭಾರತೀಯ ಕೈಗಾರಿಕೆಗಳು ಗ್ರಾಹಕರನ್ನು ಸೆಳೆಯಲು ಅವರ ಬೇಡಿಕೆಗಳನ್ನು ಈಡೇರಿಸಬೇಕು, ಅದರ ನೀತಿ ನಿಯಮಗಳು ಪಾರದರ್ಶಕವಾಗಿರಬೇಕು.
ಸಂಶೋಧನೆ ಬಗ್ಗೆ ಭಾರತದ ಬದ್ಧತೆ, ಸುಧಾರಿತ ನಾವೀನ್ಯತೆ ಗಟ್ಟಿಯಾಗಿದ್ದು ಬೆಳವಣಿಗೆ ಹೊಂದುತ್ತಿದೆ. ಸಂಶೋಧನೆ ಪರಿಸರಕ್ಕೆ ಇದು ಸಹಕಾರಿಯಾಗಿದೆ ಎಂದು ಸಿಐಐ ಮಹಾ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆಂದು ಡಬ್ಲ್ಯುಐಪಿಒ ಉಲ್ಲೇಖಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT