ದೇಶ

ಭಾರತದ ಶಿಕ್ಷಣ ಬಿಕ್ಕಟ್ಟಿನಲ್ಲಿ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ

Sumana Upadhyaya
ನವದೆಹಲಿ: ಭಾರತ ದೇಶದಲ್ಲಿ ಇರುವ 1 ಲಕ್ಷಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ ಎಂಬ ಅಪಾಯಕಾರಿ ವರದಿಯೊಂದನ್ನು ಸಂಸತ್ತಿನಲ್ಲಿ ಇತ್ತೀಚೆಗೆ ಮಂಡಿಸಲಾಗಿತ್ತು. ಹಾಗೆಯೇ ವರದಿಯಲ್ಲಿ ಭಾರತದ ಪುರಾತನ ಶಿಕ್ಷಣ ಪದ್ಧತಿಯನ್ನು ಸುಧಾರಿಸಿ ಹೊಸ ಶಿಕ್ಷಣ ನೀತಿ ಜಾರಿಗೆ ತರುವ ಸಾಧ್ಯತೆ ಬಗ್ಗೆಯೂ ಹೇಳಲಾಗಿದೆ.
ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ನಾಲ್ಕು ಪ್ರಮುಖ ಸವಾಲುಗಳಿವೆ: ವೇಗವಾಗಿ ಸಾಗುತ್ತಿರುವ ಜಾಗತಿಕ ಪರಿಸರ, ಅದು ಅಂತರ್ಜಾಲ ಕ್ರಾಂತಿಯಿಂದ ಆಗಿರುವಂತದ್ದು, ಬೇಡಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಾಸ, ಸಾಕಷ್ಟು ಬುದ್ಧಿವಂತ ಮಕ್ಕಳಿದ್ದರೂ ಶಿಕ್ಷಕರ ಕೊರತೆ, ಬದಲಾಗುತ್ತಿರುವ ತಂತ್ರಜ್ಞಾನ, ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆ ಹೊಸ ಬೇಡಿಕೆಗಳನ್ನು ಸೃಷ್ಟಿಸುತ್ತಿರುವುದು.
ಎಲ್ಲಾ ಮಕ್ಕಳಿಗೂ ಶಿಕ್ಷಣ ಮಾತ್ರವಲ್ಲ ಸಮಾನ, ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಇದಕ್ಕೆ ಸರ್ಕಾರ ನಡೆಸುವವರ ಯೋಚನೆಯ ಗುಣಮಟ್ಟ ಬದಲಾಗಬೇಕು ಮತ್ತು ವಿಕಾಸಗೊಳ್ಳುತ್ತಿರುವ ಮಾರುಕಟ್ಟೆಗೆ ತಕ್ಕಂತೆ ಯೋಜನೆಗಳಲ್ಲಿ ಬದಲಾವಣೆ, ಹೊಸತನ ಬರಬೇಕು.
SCROLL FOR NEXT