ಸುಷ್ಮಾ ಸ್ವರಾಜ್ ರಂತೆ ಉಡುಪು ಧರಿಸಿದ ಶಾಲಾ ಮಕ್ಕಳು 
ದೇಶ

ತಮ್ಮ ಉಡುಗೆ ಅನುಕರಿಸಿದ ಶಾಲಾ ಮಕ್ಕಳಿಗೆ ಸುಷ್ಮಾ ಹೃದಯಸ್ಪರ್ಶಿ ಟ್ವೀಟ್

ವಾತಂತ್ರ್ಯ ದಿನಾಚರಣೆ ವೇಳೆ ಕೆಲ ಶಾಲಾ ಮಕ್ಕಳು ಥೇಟ್ ಸುಷ್ಮಾ ಸ್ವರಾಜ್ ರಂತೆ ಉಡುಗೆ ತೊಟ್ಟಿದ್ದರು. ಈ ಉಡುಗೆ ತೊಟ್ಟ ಮಕ್ಕಳ ಭಾವ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿರುವ ಎಲ್ಲಾ ಸಚಿವರುಗಳಲ್ಲಿ ಜನರಿಗೆ ಅತ್ಯಂತ ಪ್ರೀತಿ ಪಾತ್ರರಾದವರು ಸುಷ್ಮಾ ಸ್ವರಾಜ್ ಆಗಿದ್ದಾರೆ.

ಸುಷ್ಮಾ ಕುರಿತು ಮಾಡುವ ಎಲ್ಲಾ ಟ್ವೀಟ್ ಗಳಿಗೂ ಕೇಂದ್ರ ವಿದೇಶಾಂಗ ಸಚಿವೆ ತಪ್ಪದೇ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಕೆಲ ಶಾಲಾ ಮಕ್ಕಳು ಥೇಟ್ ಸುಷ್ಮಾ ಸ್ವರಾಜ್ ರಂತೆ ಉಡುಗೆ ತೊಟ್ಟಿದ್ದರು. ಈ ಉಡುಗೆ ತೊಟ್ಟ ಮಕ್ಕಳ ಭಾವ ಚಿತ್ರಗಳನ್ನು ಶಾಲಾ ಮಕ್ಕಳ ಪೋಷಕರು ಸುಷ್ಮಾ ಅವರಿಗೆ ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 12 ರಂದು ರಾಜೇಶ್ ಎಂಬುವರು ತಮ್ಮ ಪುತ್ರಿ ರಿಯಾ ಸುಷ್ಮಾ ಸ್ವರಾಜ್ ರಂತೆ ಜಾಕೆಟ್ ಹಾಕಿಕೊಂಡು ಮರೂನ್ ಬಣ್ಣಹ ಹಣೆಬೊಟ್ಟು ಇಟ್ಟುಕೊಂಡು ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫೋಟೋ ಅಪ್ ಲೋಡ್ ಮಾಡಿದ್ದರು. ಇದಕ್ಕೆ ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸುಷ್ಮಾ ' ಐ ಲವ್ ಯುವರ್ ಜಾಕೆಟ್' ಎಂದು ಹೇಳಿದ್ದಾರೆ.

ಆಗಸ್ಟ್ 14 ರಂದು ಭವ್ಯಾ ಎಂಬ ಶಾಲಾ ಮಗುವಿನ ಫೋಟೋ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ,  ಭವ್ಯಾ, ನನ್ನನ್ನ ನಕಲಿ ಸುಷ್ಮ ಸ್ವರಾಜ್ ಎಂದು ಹಾಗೂ ನಿನ್ನನ್ನು ಅಸಲಿ ಸುಷ್ಮಾ ಸ್ವರಾಜ್ ಎಂದು ಜನ ತಿಳಿದುಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

SCROLL FOR NEXT