ನವದೆಹಲಿ: ಕಾಶ್ಮೀರ ಕುರಿತು ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಸುವ ಪಾಕಿಸ್ತಾನದ ಪ್ರಸ್ತಾಪವನ್ನು ತಿರಸ್ಕರಿಸಿರುವ ಭಾರತ, ಎರಡೂ ರಾಷ್ಟ್ರಗಳ ನಡುವಿನ ಮಾತುಕತೆಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಕೇಂದ್ರಿತವಾಗಿರಬೇಕು ಎಂದು ಹೇಳಿದೆ.
ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಅಜಾಜ್ ಅಹ್ಮದ್ ಚೌಧರಿ ಅವರ ಆಹ್ವಾನಕ್ಕೆ ಪ್ರತಿಕ್ರಿಯಿಸುತ್ತಾ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ಮಾತುಕತೆಗೆ ಇಸ್ಲಾಮಾಬಾದಿಗೆ ಹೋಗಲು ಸಿದ್ಧ. ಆದರೆ ಜಮ್ಮು-ಕಾಶ್ಮೀರದ ಪರಿಸ್ಥಿತಿ ಬಗ್ಗೆ ಚರ್ಚಿಸಲು ಪಾಕಿಸ್ತಾನ ಯಾವುದೇ ನಿರ್ಣಯ ವ್ಯಕ್ತಪಡಿಸುತ್ತಿಲ್ಲ. ಕಾಶ್ಮೀರ ಭಾರತದ ಆಂತರಿಕ ವಿಷಯ, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಉಗ್ರರ ಒಳನುಸುಳುವಿಕೆಯನ್ನು ತಡೆಗಟ್ಟದೆ ಮಾತುಕತೆಗೆ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಆಹ್ವಾನಕ್ಕೆ ಇಸ್ಲಾಮಾಬಾದಿನ ಭಾರತೀಯ ಹೈ ಕಮಿಷನರ್ ಗೌತಮ್ ಬಂಬವಾಲೆ ಅವರ ಮೂಲಕ ಹಸ್ತಾಂತರಿಸಲಾಗಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಗಡಿಯಾಚೆಗಿನ ಭಯೋತ್ಪಾದನೆ ಪ್ರಮುಖ ವಿಷಯವಾಗಿದ್ದು, ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲಿನ ಮಾತುಕತೆಯ ಮುಖ್ಯ ವಿಷಯ ಕಾಶ್ಮೀರವೇ ಆಗಬೇಕು ಎಂದು ವಿವರಿಸಿದ್ದಾರೆ.
ಕಾಶ್ಮೀರ ವಿಷಯ ಕುರಿತು ಮಾತುಕತೆಗೆ ಪಾಕಿಸ್ತಾನ ಮೊನ್ನೆ ಸೋಮವಾರ ಭಾರತವನ್ನು ಆಹ್ವಾನಿಸಿತ್ತು. ವಿವಾದವನ್ನು ಬಗೆಹರಿಸುವುದು ಎರಡೂ ದೇಶಗಳ ಅಂತಾರಾಷ್ಟ್ರೀಯ ಬದ್ಧತೆಯಾಗಿದೆ ಎಂದು ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics