ಸಾಂದರ್ಭಿಕ ಚಿತ್ರ 
ದೇಶ

ಅಪಹರಣಗೊಂಡು 10 ವರ್ಷದಲ್ಲಿ 10 ಬಾರಿ ಮಾರಾಟವಾದ 12 ವರ್ಷದ ಬಾಲಕಿ!

ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ 10 ವರ್ಷದಲ್ಲಿ 10 ಬಾರಿ ಮಾರಾಟ ಮಾಡಿರುವ ಭಯಾನಕ ಘಟನೆ ನವದೆಹಲಿಯಲ್ಲಿ ನಡೆದಿದೆ...

ನವದೆಹಲಿ: ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ 10 ವರ್ಷದಲ್ಲಿ 10 ಬಾರಿ ಮಾರಾಟ ಮಾಡಿರುವ ಭಯಾನಕ ಘಟನೆ ನವದೆಹಲಿಯಲ್ಲಿ ನಡೆದಿದೆ.

ಸುದೀರ್ಘ ತನಿಖೆಯ ನಂತರ ದೆಹಲಿ ಪೊಲೀಸರು ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ರಂಜು ಮತ್ತು ಆಕೆಯ ಪತಿ ಶ್ಯಾಂ ಸುಂದರ್ 2006 ಜುಲೈ 2 ರಂದು  ತನ್ನ ಅಕ್ಕನನ್ನು ಭೇಟಿ ಮಾಡಲು ಹೋಗುತ್ತಿದ್ದ ಬಾಲಕಿನಯನ್ನು ಜವತಾ ಕಾಲೋನಿಯಿಂದ ಅಪಹರಣ ಮಾಡಿದ್ದರು.

ಅಲ್ಲಿಂದ ಆಕೆಯನ್ನು ಅಂಬಾಲಕ್ಕೆ ಕರೆದುಕೊಂಡು ಹೋಗಿ ಬಬ್ಲಿ ಎಂಬ ಮತ್ತೊಬ್ಬ ಮಹಿಳೆಗೆ 12 ಸಾವಿರ ರೂ ಗೆ ಮಾರಾಟ ಮಾಡಿದ್ದರು ಎಂದು ಉಪ ಆಯುಕ್ತ ಎಕೆ ಸಿಂಗ್ಲಾ ತಿಳಿಸಿದ್ದಾರೆ.

ಕಳೆದ ತಿಂಗಳು ಆಕೆ ತನ್ನ ಮನೆ ಸೇರಿದ್ದು, ಘಟನೆಗಳ ಬಗ್ಗೆಂ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಮೊದಲ ಬಾರಿ ಅಂಬಾಲದಲ್ಲಿ 12 ಸಾವಿರಕ್ಕೆ ಮಾರಾಟವಾಗಿದ್ದಾಗಿ ತಿಳಿಸಿದ್ದಾಳೆ. ನಂತರದ 10 ವರ್ಷಗಳಲ್ಲಿ ವಿವಿಧ ವ್ಯಕ್ತಿಗಳಿಗೆ ಮಾರಾಟವಾಗಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದಾಗಿ ತಿಳಿಸಿದ್ದಾಳೆ.

9 ಬಾರಿ ಮಾರಾಟವಾದ ನಂತರ ಆಕೆ ತನ್ನ ಮೂರು ಪಟ್ಟು ಹೆಚ್ಚು ವಯಸ್ಸಿನ ವ್ಯಕ್ತಿಯೊಬ್ಬನನ್ನು ವಿವಾಹವಾಗಿ ಎರಡು ಮಕ್ಕಳನ್ನು ಪಡೆದಳು. ತನ್ನ ಪತಿ ಸತ್ತ ನಂತರ ಆಕೆಯನ್ನು ತನ್ನ ಗಂಡನ ಮನೆಯವರು ಮನೆಯಿಂದ ಹೊರಹಾಕಿದರು.

10 ವರ್ಷಗಳ ನಂತರ ಮನೆಗೆ ಬಂದಿರುವ ಆಕೆಗೆ ಈಗ 25 ವರ್ಷಗಳಾಗಿದ್ದು, ತನ್ನ ಅಕ್ಕ ಮತ್ತು ತಾಯಿಯ ಸಹಾಯದಿಂದ ಪೊಲೀಸರ ಬಳಿ ಬಂದು ತನ್ನ ಜೀವನದಲ್ಲಿ ನಡೆದ ಎಲ್ಲಾ ಘಟನೆಯ ಬಗ್ಗೆ ವಿವರಿಸಿದ್ದಾರೆ.

ತನಿಖೆ ವೇಳೆ ಆಕೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಎನ್ ಜಿಓ ವೊಂದು ಆಕೆಗೆ ಕೌನ್ಸೆಲಿಂಗ್ ನಡೆಸಿದೆ. ಆಕೆ ನೀಡಿದ ಮಾಹಿತಿಯಂತೆ ವಿಶೇಷ ತನಿಖಾ ತಂಡ ಪಂಜಾಬ್, ಹರಿಯಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿ ಮಾನ ಕಳ್ಳಸಾಗಣೆ ನಡೆಸುತ್ತಿದ್ದ ನಟೋರಿಯಸ್ ಗ್ಯಾಂಗ್ ವೊಂದನ್ನು ಬಂಧಿಸಿದೆ. ಕಿಂಗ್ ಪಿನ್ ಬಬ್ಲಿ ಯನ್ನು ಬಂಧಿಸಿರುವ ಪೊಲೀಸರು ಆಕೆ ಕಿಡ್ನಾಪ್ ಮಾಡಿದ್ದ ಇಬ್ಬರು ಅಪ್ರಾಪ್ತರನ್ನು ರಕ್ಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ