ನರೇಂದ್ರ ಮೋದಿ 
ದೇಶ

ಪ್ರಧಾನಿ ಮೋದಿ ಈಗಲೂ ಜನಪ್ರಿಯ ನಾಯಕ: ನೂತನ ಸಮೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಅಬಾಧಿತವಾಗಿದ್ದು, ದೇಶದಲ್ಲಿ ಈಗ ಲೋಕಸಭೆ ಚುನಾವಣೆ ನಡೆದರೂ ಎನ್ ಡಿಎ ಬಹುಮತ ಪಡೆಯಲಿದೆ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಅಬಾಧಿತವಾಗಿದ್ದು, ದೇಶದಲ್ಲಿ ಈಗ ಲೋಕಸಭೆ ಚುನಾವಣೆ ನಡೆದರೂ ಎನ್ ಡಿಎ ಬಹುಮತ ಪಡೆಯಲಿದೆ ಎಂದು ನೂತನ ಸಮೀಕ್ಷೆಯೊಂದು ಹೇಳಿದೆ.
'ಇಂಡಿಯಾ ಟುಡೇ-ಕಾರ್ವಿ' ನಡೆಸಿದ ನೂತನ ಸಮೀಕ್ಷೆ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಜನಪ್ರಿಯ ನಾಯಕರಾಗಿ ಮತದಾರರ ಮನದಲ್ಲಿ ಉಳಿದುಕೊಂಡಿದ್ದು, ಈಗ ಚುನಾವಣೆ ನಡೆದರೆ ಎನ್ ಡಿಎ 304 ಸ್ಥಾನಗಳೊಂದಿಗೆ ಪುನಃ ಬಹುಮತ ಗಳಿಸಲಿದೆ ಎಂದು ಹೇಳಿದೆ.
ಜನಪ್ರಿಯ ಪ್ರಧಾನಿ ಅಭ್ಯರ್ಥಿಗಳಲ್ಲಿ ನರೇಂದ್ರ ಮೋದಿ ಶೇ.50, ರಾಹುಲ್‌ ಗಾಂಧಿ ಕೇವಲ ಶೇ.13 ಮತ ಪಡೆದಿದ್ದಾರೆ. ಶೇಕಡಾವಾರು ಮತದಲ್ಲಿ ಎನ್‌ಡಿಎ 40, ಯುಪಿಎ 26, ಇತರರು 36 ಮತ ಪಡೆಯಲಿದ್ದಾರೆ.
ಎನ್‌ಡಿಎ 2014ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 32 ಸೀಟು ಕಡಮೆ ಗಳಿಸಲಿದ್ದರೂ ಬಹುಮತ ಪಡೆಯಲಿದೆ. ಕಾಂಗ್ರೆಸ್‌ 35 ಸೀಟು ಸಾಮರ್ಥ್ಯ ವೃದ್ಧಿಸಿಕೊಂಡು 94 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. 
ನಿತೀಶ್‌ ನಂ.1: ಜನಪ್ರಿಯ ಸಿಎಂಗಳಲ್ಲಿ ಬಿಹಾರದ ನಿತೀಶ್‌ ಕುಮಾರ್‌ ಮೊದಲ ಸ್ಥಾನಿ ಯಾಗಿದ್ದು, 87 ಅಂಕ ಪಡೆದಿದ್ದಾರೆ. ಮ.ಪ್ರ.ದ ಶಿವರಾಜ್‌ ಚೌಹಾಣ್‌ 81, ಛತ್ತೀಸ್‌ಗಢದ ರಮಣ್‌ ಸಿಂಗ್‌ 70 ಅಂಕ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ