ದೇಶ

ಗೋಪಿಚಂದ್ ಉತ್ತಮ, ಆದರು ಸಿಂಧುಗೆ ಇನ್ನೂ ಉತ್ತಮ ಕೋಚ್ ನೇಮಕ: ತೆಲಂಗಾಣ ಡಿಸಿಎಂ

Lingaraj Badiger
ಹೈದರಾಬಾದ್: ಇದೊಂದು ಆಘಾತಕಾರಿ ಹೇಳಿಕೆ ಅಂತಾನೇ ಹೇಳಬಹುದು. ರಿಯೋ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಬೆಳ್ಳೆ ಪದಕ ಗೆಲ್ಲಲ್ಲು ಕಾರಣವಾದ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದ್ದರೆ, ತೆಲಂಗಾಣ ಸರ್ಕಾರ ಮಾತ್ರ ಅವರ ಸ್ಥಾನಕ್ಕೆ ಕೈಹಾಕಿದೆ.
ಪುಲ್ಲೇಲ ಗೋಪಿಚಂದ್ ಅವರು ಉತ್ತಮ ಕೋಚ್. ಆದರೂ ಪಿ,ವಿ.ಸಿಂಧುಗೆ ತೆಲಂಗಾಣ ಸರ್ಕಾರ ಇನ್ನೂ ಉತ್ತಮ ಕೋಚ್ ಅನ್ನು ಹುಡುಕಲಾಗುವುದು ಎಂದು ತೆಲಂಗಾಣ ಉಪ ಮುಖ್ಯಮಂತ್ರಿ ಮೊಹಮ್ಮದ್ ಮಹಮೂದ್ ಅಲಿ ಅವರು ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಅಲಿ, ಗೋಪಿಚಂದ್ ಅವರು ಉತ್ತಮ ಕೋಚ್ ಎಂದು ಹೊಗಳಿದ್ದಾರೆ. ಆದರೆ 2016ರ ರಿಯೋ ಒಲಿಪಿಂಕ್ಸ್ ನಲ್ಲಿ ಬೆಳ್ಳಿಪದ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರವಾಗಿರುವ ಪಿ.ವಿ.ಸಿಂಧು ತರಬೇತಿ ನೀಡಲು ಇನ್ನು ಉತ್ತಮ ಕೋಚ್ ಹುಡುಕಲಾಗುವುದು ಎಂದಿದ್ದಾರೆ.
ಬ್ರೆಜಿಲ್ ನಿಂದ ಇಂದು ಹೈದರಾಬಾದ್ ಗೆ ಆಗಮಿಸಿದ ಪಿ.ವಿ.ಸಿಂಧು ಹಾಗೂ ಪುಲ್ಲೇಲ ಗೋಪಿಚಂದ್ ಇಬ್ಬರಿಗೂ ತೆಲಂಗಾಣ ಸರ್ಕಾರ ಅದ್ಧೂರಿ ಸ್ವಾಗತ ನೀಡಿತು. ಅಲ್ಲದೆ ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಇಬ್ಬರಿಗೂ ಸನ್ಮಾನ ಮಾಡಿದೆ.
SCROLL FOR NEXT