ಪ್ರವಾಹ ಪೀಡಿತರ ಮನೆಗೆ ಲಾಲು ಭೇಟಿ, ನಿಮ್ಮ ಮನೆಗೆ ಗಂಗಾಜಲ ಬಂದಿದ್ದು ಅದೃಷ್ಣ ಎಂದ ಮಾಜಿ ಸಿಎಂ
ಪ್ರವಾಹ ಪೀಡಿತರ ಮನೆಗೆ ಗಂಗಾಜಲ ಬಂದಿದ್ದು ಅವರ ಅದೃಷ್ಟ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು...
ಪಾಟ್ನಾ: ಪ್ರವಾಹ ಪೀಡಿತರ ಮನೆಗೆ ಗಂಗಾಜಲ ಬಂದಿದ್ದು ಅವರ ಅದೃಷ್ಟ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಹೇಳಿದ್ದಾರೆ.
ಪ್ರವಾಹ ಪೀಡಿತ ಸಂತ್ರಸ್ತರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಲಾಲು, ಪ್ರತಿಯೊಬ್ಬರ ಮನೆಗೂ ಗಂಗಾಜಲ ಬರುವುದಿಲ್ಲ. ಆದರೆ ನೀವು ಅದೃಷ್ಟವಂತರು. ನಿಮ್ಮ ಮನೆಗೆ ಗಂಗೆ ಬಂದಿದ್ದಾಳೆ. ಗಂಗೆ ಎಲ್ಲರನ್ನು ರಕ್ಷಿಸುತ್ತಾಳೆ ಎಂದಿದ್ದಾರೆ.
ಬಿಹಾರದಲ್ಲಿ ಪ್ರವಾಹದಿಂದಾಗಿ ಇದುವರೆಗೆ 14 ಮಂದಿ ಮೃತಪಟ್ಟಿದ್ದಾರೆ ಮತ್ತು ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪ್ರವಾಹ ಸಂತ್ರಸ್ತರು ಪ್ರತಿಭಟನೆ ನಡೆಸಿದ ನಂತರ ಲಾಲು ಅವರ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಈ ರೀತಿ ಸಂವೇದನೆ ಇಲ್ಲದ ಹೇಳಿಕೆ ನೀಡಿದ್ದಾರೆ.