ದೇಶ

ದರ್ಗಾದಲ್ಲಿ ಮುಸ್ಲಿಂ, ಹಿಂದೂ, ಸಿಖ್ಖರಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ

Vishwanath S

ಜೈಪುರ: ಹಿಂದೂಗಳ ಪವಿತ್ರ ಹಬ್ಬವಾಗಿರುವ ಕೃಷ್ಣ ಜನ್ಮಾಷ್ಟಮಿಯನ್ನು ಜುಂಜ್ ಹುನ್ ಜಿಲ್ಲೆಯ ನರ್ ಹದ್ ಗ್ರಾಮದಲ್ಲಿ ಶರೀಫ್ ಹಜರತ್ ಹಜೀಬ್ ಶಕರ್ ಬಾರ್ ದರ್ಗಾದಲ್ಲಿ ಮುಸ್ಲಿಂರು, ಹಿಂದೂಗಳು ಹಾಗೂ ಸಿಖ್ಖರು ಜತೆಯಾಗಿ ಆಚರಿಸಿದ್ದಾರೆ.

ಕಳೆದ 300 ವರ್ಷಗಳಿಂದ ಇಲ್ಲಿ ಸಂಗೀತ, ನಾಟಕ, ಖವಾಲಿ ಕಾರ್ಯಕ್ರಮಗಳೊಂದಿಗೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮೌಲಾನ ಹಸ್ರತ್ ಮೊಹಾನಿ, ನಜೀರ್ ಅಕ್ಬರಬಾದಿ ಬರೆದಿರುವ ಕೃಷ್ಣನ ಕುರಿತ ಗೀತ ಗಾಯನಗಳು ನಡೆಸುತ್ತವೆ. ಈ ಮೂಲಕ ಶತಮಾನಗಳಿಂದ ಸಮುದಾಯಗಳ ಮಧ್ಯೆ ಇರುವ ಸಮನ್ವಯ ಮತ್ತು ಶಾಂತಿಯನ್ನು ಮತ್ತಷ್ಟು ಭದ್ರಪಡಿಸಿಕೊಂಡು ಬಂದಿದೆ.

ಹಿಂದೂ ಮುಸ್ಲಿಂರ ಸಹೋದರತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸೂಫಿ ಸಂತರು ಈ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಜಾರಿಗೆ ತಂದರು. ದರ್ಗಾ ಸಮೀಪ 400 ಅಂಗಡಿಗಳಿವೆ. ಇಲ್ಲಿ ಜನ್ಮಾಷ್ಟಮಿ ಆಚರಣೆ ಭಾಗವಾಗಿ ವಿವಿಧ ಸಾಂಸ್ಕೃತಿಕ ಮತ್ತು ಕಲಾ ಕಾರ್ಯಕ್ರಮಗಳು ನಡೆಯುತ್ತವೆ.

SCROLL FOR NEXT