ಶ್ರೀನಗರ: ಕಾಶ್ಮೀರ ಪ್ರತ್ಯೇಕತಾವಾದಿ ಹೋರಾಟಗಾರರ ಗುಂಡಿಗೆ ಓರ್ವ ಪೊಲೀಸ್ ಪೇದೆ ಬಲಿಯಾಗಿದ್ದಾರೆ.
ಸೆಲೆಕ್ಷನ್ ಗ್ರೇಡ್ ನ ಪೇದೆ ಖುರ್ಷಿದ್ ಅಹ್ಮದ್ ಕಾಶ್ಮೀರದ ಕೊಯ್ಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಪ್ರತ್ಯೇಕತಾವಾದಿ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ, ಗುಂಡೇಟಿಗೀಡಾದ ಪೊಲೀಸ್ ಪೇದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಎರಡು ದಿನಗಳ ಹಿಂದೆ ಉಗ್ರರು ಗ್ರೆನೇಡ್ ದಾಳಿಯನ್ನು ನಡೆಸಿದ್ದ ಪರಿಣಾಮ ಭದ್ರತಾ ಪಡೆಯ 15 ಸಿಬ್ಬಂದಿಗಳು ಗಾಯಗೊಂಡಿದ್ದರು.