ದೇಶ

ಮಹಾರಾಷ್ಟ್ರದಲ್ಲಿ ಅತ್ಯಾಚಾರಿ, ಕೊಲೆ, ಅಪಹರಣ ಅಪರಾಧಿಗಳಿಗಿಲ್ಲ ಪೆರೋಲ್

Vishwanath S
ಮುಂಬೈ: ಅತ್ಯಾಚಾರ, ಕೊಲೆ, ಡರೋಡೆ, ಅಪಹರಣದಂತೆ ಗಂಭೀರ ಕೃತ್ಯಗಳನ್ನು ಎಸಗಿ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಿಗಳಿಗೆ ನಿಯಮಿತ ಪೆರೋಲ್ ನೀಡದಿರಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ.
2012ರಲ್ಲಿ ಮುಂಬೈನ ವಕೀಲೆ ಪಲ್ಲವಿ ಎಂಬುವರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ ಅಪರಾಧಿ ಸಜ್ಜದ್ ಮೊಘಲ್ ಪೆರೋಲ್ ಮೇಲೆ ಇದೇ ವರ್ಷದ ಆರಂಭದಲ್ಲಿ ಹೊರ ಬಂದಿದ್ದ ಆತ ತಲೆ ಮರೆಸಿಕೊಂಡಿದ್ದ.
2014ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸಜ್ಜದ್ ಅಸ್ವಸ್ಥ ತಾಯಿಯನ್ನು ನೋಡಿಕೊಂಡು ಬರುವುದಾಗಿ ಹೇಳಿ ಪೆರೋಲ್ ಮೇಲೆ ಹೊರ ಬಂದು ತಲೆ ಮರೆಸಿಕೊಂದ್ದಾನೆ. ಇನ್ನು ಇತನನ್ನು ಹಿಡಿಯುವಲ್ಲಿ ಮುಂಬೈ ಪೊಲೀಸರು ವಿಫಲರಾಗಿದ್ದರು. 
ಇದರಿಂದಾಗಿ ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ಮಾಡಿದಂತ ಅಪರಾಧಿಗಳಿಗೆ ಪೆರೋಲ್ ನೀಡದಿರಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ.
SCROLL FOR NEXT