ನವದೆಹಲಿ: ರಾಜಧಾನಿ ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ,ರಾಜಸ್ತಾನ ಮೊದಲಾದ ಕಡೆ ಸತತ ಮೂರನೇ ದಿನವಾದ ಶುಕ್ರವಾರ ಕೂಡ ಬೆಳಗ್ಗೆಯಿಂದಲೇ ಮಂಜು ಮುಸುಕಿದ ವಾತಾವರಣವಿದೆ. 50 ಮೀಟರ್ ಗಿಂತಲೂ ಕಡಿಮೆ ಗೋಚರತೆ ಕಂಡುಬಂದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಕನಿಷ್ಠ ತಾಪಮಾನ 11.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಆಕಾಶ ಶುಭ್ರವಾಗಿದ್ದರೂ ಕೂಡ ಕೆಲವು ಪ್ರದೇಶಗಳಲ್ಲಿ ದಟ್ಟವಾದ ಮಂಜು ಮುಸುಕಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಇಂದು ಬೆಳಗ್ಗೆ 8.30ರ ಹೊತ್ತಿಗೆ ಆರ್ದ್ರತೆ ಶೇಕಡಾ 98ರಷ್ಟಿತ್ತು. ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ನ ಸುತ್ತಮುತ್ತವಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿಯೂ ಭಾರೀ ಮಂಜು ಕವಿದಿದೆ.