ಕುಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಎನ್‌ಕೌಂಟರ್ ವೇಳೆ ಭಾರತೀಯ ಸೇನೆಗೆ ಹೆದರಿ ಉಗ್ರರು ಘಟನಾ ಸ್ಥಳದಿಂದ ಪಲಾಯನವಾಗಿದ್ದು ಕಾರ್ಯಾಚರಣೆ ಅಂತ್ಯಗೊಂಡಿದೆ.
ಗುಪ್ತಚರ ಮಾಹಿತಿ ಹಿನ್ನೆಲೆ ಉಗ್ರರ ವಿರುದ್ಧ ಭದ್ರತಾ ಪಡೆ ಯೋಧರು ಕಾರ್ಯಾಚರಣೆ ಕೈಗೊಂಡಿದ್ದು, ಉಗ್ರರು ಹಾಗೂ ಭದ್ರತಾ ಪಡೆ ಯೋಧರ ನಡುವೆ ಕೆಲವೊತ್ತು ಗುಂಡಿನ ದಾಳಿ ನಡೆದಿದೆ. ಬಳಿಕ ಉಗ್ರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕಳೆದ ರಾತ್ರಿ ಪಾಕಿಸ್ತಾನದ ನುಸುಳುಕೋರನನ್ನು ಭದ್ರತಾ ಪಡೆ ಯೋಧರು ಪಂಜಾಬ್ ನ ಪಠಾನ್ ಕೋಟ್ ಬಮಿಯಾಳ್ ಸೆಕ್ಟರ್ ಹತ್ತಿಯ ಹೊಡೆದುಹಾಕಿದ್ದಾರೆ.
ಕಳೆದ ಮಂಗಳವಾರ ಭಾರತ ಗಡಿ ಪ್ರವೇಶಿಸುತ್ತಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆ ವೇಳೆ ಬಿಎಸ್ಎಫ್ ಯೋಧರೊಬ್ಬರು ಗಾಯಗೊಂಡಿದ್ದರು.