ಚೆನ್ನೈ: ಕಳೆದ ರಾತ್ರಿ ನಿಧನರಾದ ಜಯಲಲಿತಾ, ಕಳೆದ ಮೂರು ದಶಕಗಳಿಂದ ರಾಜಕೀಯ ನಡೆಸಿ ತಮಿಳಿಗರ ಪಾಲಿಗೆ ಅಮ್ಮ ಆಗಿದ್ದರು.
ರಾಜಕೀಯಕ್ಕೆ ಕಾಲಿಟ್ಟಾಗಿನಿಂದ ತಮಿಳುನಾಡಿನ ತಮ್ಮ ಬೆಂಬಲಿಗರಿಂದ ಹಲವು ಬಿರುದು ಬಾವಲಿಗಳಿಗೆ ಪಾತ್ರರಾಗಿದ್ದಾರೆ. ರಾಜಕೀಯ ಗುರು ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ ರಾಮಚಂದ್ರನ್ 1987 ರಲ್ಲಿ ಸಾವನ್ನಪ್ಪಿದ ನಂತರ ಪಕ್ಷವನ್ನು ಮುನ್ನಡೆಸಿದರು. ಈ ವೇಳೆ ಅವರನ್ನು ತಲೈವಿ ಪುರುಚಿ ಎಂದು ಬಿರುದು ಪಡೆದರು.
ತಲೈವಿ ಪುರುಚಿ ಎಂದರೇ ಕ್ರಾಂತಿಕಾರಿ ನಾಯಕಿ ಎಂದು ಅರ್ಥ, ವರ್ಷಗಳ ನಂತರ ಮದರ್ ಥೆರೆಸಾ ಹಾಗೂ ತಂಗ ತರಂಗಿ (ಗೋಲ್ಡನ್ ಲೇಡಿ) ಎಂಬ ಬಿರುದುಗಳಿಗೆ ಪಾತ್ರರಾದರು.ಇದಾದ ನಂತರ ಹಲವು ಬಿರುದುಗಳನ್ನು ಜಯಲಲಿತಾ ಅವರಿಗೆ ನೀಡಿದರು, ತಮಿಳುನಾಡಿನ ಅಮ್ಮ ಎಂದೇ ಅವರು ಪ್ರಸಿದ್ದರಾದರು.