ಜಯಲಲಿತಾ ನಿಧನಕ್ಕೆ ಸಂಸತ್ ನಲ್ಲಿ ಸಂತಾಪ: ಕಲಾಪ ಮುಂದೂಡಿಕೆ
ನವದೆಹಲಿ: ತಮಿಳುನಾಡು ಸಿಎಂ ಜಯಲಲಿತಾ ನಿಧನಕ್ಕೆ ಸಂಸತ್ ನಲ್ಲಿ ಸಂತಾಪ ಸೂಚಿಸಲಾಗಿದ್ದು, ದೇಶ ಧೈರ್ಯ ಮತ್ತು ವರ್ಚಸ್ವಿ ನಾಯಕಿಯನ್ನು ಕಳೆದುಕೊಂಡಿದೆ ಎಂದು ಸಂಸತ್ ಹೇಳಿದೆ.
1984-89 ರ ಅವಧಿಯಲ್ಲಿ ಜಯಲಲಿತಾ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಜಯಲಲಿತಾ ಅವರನ್ನು ಅತ್ಯುತ್ತಮ ಸಂಸದೀಯ ಪಟು ಎಂದಿರುವ ರಾಜ್ಯಸಭೆಯ ಅಧ್ಯಕ್ಷ ಹಮೀದ್ ಅನ್ಸಾರಿ, ದೇಶ ಶ್ರೇಷ್ಠ ಆಡಳಿತ ನಡೆಸುವ ವ್ಯಕ್ತಿಯನ್ನು ಕಳೆದುಕೊಂಡಿದೆ ಎಂದಿದ್ದಾರೆ.
ಸುಮಿತ್ರಾ ಮಹಾಜನ್ ಸಹ ಜಯಲಲಿತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಧೈರ್ಯಶಾಲಿಯಾಗಿದ್ದ ಅಸಾಧಾರಣ ವ್ಯಕ್ತಿತ್ವವನ್ನು ಭಾರತ ಕಳೆದುಕೊಂಡಿದೆ ಎಂದಿದ್ದಾರೆ. ಜಯಲಲಿತಾ ಅವರನ್ನು ತಮಿಳುನಾಡಿನಲ್ಲಿ ಅಮ್ಮಾ ಪುರಚ್ಚಿ ತಲೈವಿ( ಕ್ರಾಂತಿಕಾರಿ ನಾಯಕಿ) ಎನ್ನುತ್ತಿದ್ದರು ಎಂದು ಜಯಲಲಿತಾ ಅವರ ಜನಪ್ರಿಯತೆಯನ್ನು ಸ್ಮರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics