ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 1,235 ಕೆಜಿ ತೂಕದ ಇತ್ತೀಚಿನ ದೂರಸಂವೇದಿ ಉಪಗ್ರಹ ರಿಸೊರ್ಸ್ ಸಾಟ್-2ಎಯನ್ನು ಧ್ರುವೀಯ ಸಿಂಕ್ರೊನಸ್ ಆರ್ಬಿಟ್(ಎಸ್ಎಸ್ಒ) ನ ಪಿಎಸ್ಎಲ್ ವಿ-ಸಿ36ನಲ್ಲಿ ಯಶಸ್ವಿಯಾಗಿ ಬುಧವಾರ ಸೇರಿಸಲಾಯಿತು.
ಈ ಬಾರಿ ಕೇವಲ ಒಂದು ಉಪಗ್ರಹವನ್ನು ಮಾತ್ರ ಕಕ್ಷೆಗೆ ಸೇರಿಸುವ ಯಾನದಲ್ಲಿತ್ತು. ಕಡಿದಾದ ಮೇಲ್ಮಟ್ಟದಿಂದಾಗಿ ಈ ಬಾರಿ ಒಂದೇ ಒಂದು ಉಪಗ್ರಹವನ್ನು ಸೇರಿಸಲಾಯಿತು ಎಂದು ಇಸ್ರೋ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ತಿಳಿಸಿದ್ದಾರೆ. ವಾಹಕದ ಉಡ್ಡಯನ ನಿಖರವಾಗಿತ್ತು. ರಾಕೆಟ್ ನಲ್ಲಿ 5 ಕ್ಯಾಮರಾಗಳಿದ್ದವು, ಎಂದು ವಿವರಿಸಿದರು.
ರಿಸೊರ್ಸ್ ಸ್ಯಾಟ್ -2ಎ ಸರಣಿ ಉಪಗ್ರಹವಾಗಿದ್ದು, ರಿಸೊರ್ಸ್ ಸಾಟ್-1 ಮತ್ತು ರಿಸೊರ್ಸ್ ಸಾಟ್-2 ಈ ಹಿಂದೆ 2003 ಮತ್ತು 2011ರಲ್ಲಿ ಕ್ರಮವಾಗಿ ಉಡಾವಣೆಗೊಂಡಿತ್ತು.