ನವದೆಹಲಿ: ಸಂಸತ್ತಿನಲ್ಲಿ ಅಧಿವೇಶನ ಆರಂಭವಾದಾಗಿನಿಂದಲೂ ಸುಗಮವಾಗಿ ಕಲಾಪ ಸಾಗದಿರುವುದಕ್ಕೆ ತೀವ್ರ ಬೇಸರವನ್ನು ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ವಿರುದ್ಧ ಗುಡುಗಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರನ್ನುದ್ದೇಶಿಸಿ ಮಾತನಾಡಿರುವ ಅವರು, ಸಂಸತ್ತಿನಲ್ಲಿ ಸುಗಮವಾಗಿ ಕಲಾಪ ಸುಗಮವಾಗಿ ಸಾಗದಿರುವುದಕ್ಕೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ನೇರಹೊಣೆಯಾಗಿವೆ. ಸುಗಮ ಕಲಾಪ ನಡೆಸಲು ಅಡ್ಡಿಯಾದವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಅಲ್ಲದೆ, ಇದೇ ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ವಿರುದ್ಧ ಗುಡುಗಿರುವ ಅವರು, ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿರುವುದಾಗಿ ಮಾಹಿತಿ ತಿಳಿದುಬಂದಿದೆ. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಸರಿಯಾಗಿ ನಡೆಸಿಕೊಡುತ್ತಿಲ್ಲ. ಈ ಮಾತನ್ನು ನಾನು ಸಾರ್ವಜನಿಕವಾಗಿ ಹೇಳುತ್ತೇನೆ. ಕಲಾಪ ನಾಶವಾಗುತ್ತಿರುವುದಕ್ಕೆ ಸರ್ಕಾರ ಹಾಗೂ ವಿರೋಧಪಕ್ಷಗಳು ನೇರ ಹೊಣೆಯಾಗಿವೆ. ಕಲಾಪವನ್ನು ನಡೆಸಲು ನಿಮ್ಮಿಂದ ಸಾಧ್ಯವಾಗದಿದ್ದರೆ, ಕಲಾಪವನ್ನೇಕೆ ಮುಂದೂಡುತ್ತೀರಿ. ಅನಿರ್ದಿಷ್ಟಾವಧಿಗೆ ಏಕೆ ಮುಂದೂಡಬಾರದು ಎಂದು ಕೇಳಿದ್ದಾರೆ.
ಸುಗಮ ಕಲಾಪಕ್ಕೆ ಅಡ್ಡಿಯಾದವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಬೇಕಿದ್ದು, ಹಠಮಾರಿತನದ ವರ್ತನೆ ತೋರುತ್ತಿರುವ ನಾಯಕರ ವೇತನವನ್ನು ಕಡಿತಗೊಳಿಸಬೇಕಿದೆ ಎಂದು ತಿಳಿಸಿದ್ದಾರೆ.