ರಾಧಾರಾಣಿ ಪಾಂಡಾ 
ದೇಶ

ಪೊಲೀಸರು ಮಹಿಳೆಯೊಬ್ಬರಿಗೆ ಕಪ್ಪು ಬಣ್ಣದ ಒಳ ಉಡುಪು ಬಿಚ್ಚುವಂತೆ ಹೇಳಿದ್ದರು: ಬಿಜೆಪಿ ಶಾಸಕಿ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಾರ್ಯಕ್ರಮದ ಸ್ಥಳಕ್ಕೆ ತೆರಳುವ ಮುನ್ನ ಪೊಲೀಸರು ಮಹಿಳೆಯೊಬ್ಬರಿಗೆ ಅವರ ಕಪ್ಪು...

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಾರ್ಯಕ್ರಮದ ಸ್ಥಳಕ್ಕೆ ತೆರಳುವ ಮುನ್ನ ಪೊಲೀಸರು ಮಹಿಳೆಯೊಬ್ಬರಿಗೆ ಅವರ ಕಪ್ಪು ಬಣ್ಣದ ಒಳ ಉಡುಪು ಬಿಚ್ಚುವಂತೆ ಸೂಚಿಸಿದ್ದರು ಎಂದು ಬಿಜೆಪಿ ಶಾಸಕಿ ರಾಧಾರಾಣಿ ಪಾಂಡಾ ಅವರು ಗುರುವಾರ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಭದ್ರತಾ ಸಿಬ್ಬಂದಿ ಮಹಿಳೆಯರ ಹಾಗೂ ಬಾಲಕಿಯರ ಸ್ಕಾರ್ಪ್ ತೆಗೆಸುವ ವಿಷಯದ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪಾಂಡಾ ಅವರು, ಡಿಸೆಂಬರ್ 4ರಂದು ಸುಂದರಗಢ್ ಜಿಲ್ಲೆಯಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯೊಬ್ಬರಿಗೆ ಕಪ್ಪು ಬಣ್ಣದ ಒಳ ಉಡುಪು ಬಿಚ್ಚುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಆ ಮಹಿಳೆಗೆ ತನ್ನ ಕಪ್ಪು ಬಣ್ಣದ ಪೆಟಿಕೋಟ್ ಸಹ ತೆಗೆಯುವಂತೆ ಹೇಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
25ರಂದು ಮಾಧ್ಯಮಗಳ ವರದಿಯಿಂದ ಈ ಘಟನೆ ನನ್ನ ಗಮನಕ್ಕೆ ಬಂತು ಎಂದಿರುವ ಬಿಜೆಪಿ ಶಾಸಕಿ,  ಸುಂದರಗಢ್ ದ ಬರ್ಗಗಢಾದಲ್ಲಿ ನಡೆದ ಪಟ್ನಾಯಕ್ ಅವರ ಕಾರ್ಯಕ್ರಮದ ವೇಳೆ ಐದು ವರ್ಷದ ಒಂದು ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ.
ಇನ್ನು ನವೆಂಬರ್ 23ರಂದು ಜಾರ್ಸುಗುಡಾ ದಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಗೆ ಆಗಮಿಸುತ್ತಿದ್ದ ಮಹಿಳೆಯಬ್ಬರ ಕಪ್ಪು ಬಣ್ಣದ ಶಾಲನ್ನು ಬಲವಂತವಾಗಿ ತೆಗೆಸಿದ್ದಾರೆ ಎಂದು ಮತ್ತೊಂದು ಆರೋಪ ಮಾಡಿರುವ ಪಾಂಡಾ ಅವರು, ನಿಮ್ಮ ಸರ್ಕಾರ ಮಹಿಳೆಯರಿಗೆ ಕೊಡುತ್ತಿರುವ ಗೌರವ ಇದೇನಾ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video