ದೇಶ

ಅಕ್ರಮ ದೂರವಾಣಿ ಎಕ್ಸ್‏ಚೇಂಜ್ ಕೇಸ್: ಮಾರನ್ ಸಹೋದರರ ವಿರುದ್ಧ ಸಿಬಿಐ ಚಾರ್ಜ್ ಶೀಟ್

Lingaraj Badiger
ನವದೆಹಲಿ: ಅಕ್ರಮವಾಗಿ ತಮ್ಮ ನಿವಾಸದಲ್ಲಿ ದೂರವಾಣಿ ವಿನಿಮಯ ಕೇಂದ್ರ ಸ್ಥಾಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಬಿಐ, ಮಾಜಿ ಟೆಲೆಕಾಂ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಕಲಾನಿಧಿ ಮಾರನ್ ಮತ್ತು ಇತರೆ ಮೂವರು ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಮಾಜಿ ಸಚಿವ ದಯಾನಿಧಿ ಮಾರನ್ ಅವರ ಆಪ್ತ ಕಾರ್ಯದರ್ಶಿ ಹಾಗೂ ಇಬ್ಬರು ಬಿಎಸ್ಎನ್ಎಲ್ ನ ಚೀಫ್ ಜನರಲ್ ಮ್ಯಾನೇಜರ್ ಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ.
ಮಾರ್ ಸಹೋದರರು ಹಾಗೂ ಇತರೆ ಮೂವರ ವಿರುದ್ಧ ಸಿಬಿಐ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಚಾರ್ಜ್ ಶೀಟ್ ದಾಖಲಿಸಿದ್ದು, ಅಕ್ರಮ ದೂರವಾಣಿ ವಿನಿಮಯ ಕೇಂದ್ರದಿಂದಾಗಿ ಸರ್ಕಾರಕ್ಕೆ 1.78 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಸಿಬಿಐ ಚಾರ್ಜ್ ಶೀಟ್ ನಲ್ಲಿ ಆರೋಪಿಸಿದೆ.
ದೂರಸಂಪರ್ಕ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ಅತ್ಯಧಿಕ ವೇಗದ ದೂರವಾಣಿ ಸಂಪರ್ಕಗಳನ್ನು ಪಡೆದು ಅದನ್ನು ಸನ್‌ ಟಿವಿ ನೆಟ್‌ವರ್ಕ್‌ನ ವಾಹಿನಿಗಳನ್ನು ಪ್ರಸಾರ ಮಾಡಲು ಬಳಸಿಕೊಂಡಿದ್ದ ಆರೋಪ ಮಾರನ್‌ ಎದುರಿಸುತ್ತಿದ್ದಾರೆ.
SCROLL FOR NEXT