ಶ್ರೀನಗರ: ಪ್ರವಾಸಿಗರಿಗೆ ಕಾಶ್ಮೀರಕ್ಕಿಂತ ಸುರಕ್ಷಿತ ಸ್ಥಳ ಈ ಪ್ರಪಂಚದಲ್ಲಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶನಿವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪ್ರವಾಸಿಗರ ಆಕರ್ಷಿತ ತಾಣವಾಗಿದ್ದು, ಪ್ರವಾಸಿಗರಿಗೆ ಕಾಶ್ಮೀರಕ್ಕಿಂತ ಸುರಕ್ಷಿತ ಸ್ಥಳ ಈ ಪ್ರಪಂಚದಲ್ಲಿಲ್ಲ. ಮುಂಬರುವ ಜನವರಿ ತಿಂಗಳಿನಲ್ಲಿ ಗುಲ್ಮಾರ್ಗ್ ನಲ್ಲಿ 'ಸ್ನೋ ಫೆಸ್ಟಿವಲ್' ಆಯೋಜಿಸಲಾಗಿದ್ದು, ಈ ಮೂಲಕ ದೇಶ ಹಾಗೂ ವಿಶ್ವದ ಎಲ್ಲಾ ಪ್ರವಾಸಿಗರಿಗೆ ಕಾಶ್ಮೀರ ಆತ್ಮೀಯ ಆಮಂತ್ರಣ ನೀಡುತ್ತಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮಂಜು ಬೀಳಲಿದ್ದು, ಸುಂದರ ಪ್ರಕೃತಿಯನ್ನು ಆನಂದಿಸುವಂತೆ ಇಡೀ ವಿಶ್ವಕ್ಕೆ ಕಾಶ್ಮೀರದ ಬಹಿರಂಗ ಆಮಂತ್ರಣವನ್ನು ನೀಡುತ್ತಿದೆ. ಕಾಶ್ಮೀರದ ಸ್ವರ್ಗದ ತಾಣವಾಗಿದ್ದು, ಪ್ರವಾಸಿಗರಿಗೆ ಅತ್ಯಂತ ಸುರಕ್ಷಿತ ತಾಣವಾಗಿದೆ. ಪ್ರಮುಖವಾಗಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ತಾಣವಾಗಿದೆ ಎಂದು ತಿಳಿಸಿದ್ದಾರೆ.