ನವದೆಹಲಿ: ನೋಟು ನಿಷೇಧ ಘೋಷಣೆ ಹೊರಬಿದ್ದ ನ.8ರ ಬಳಿಕ ಡಿಜಿಟಲ್ ರೂಪದಲ್ಲಿವ್ಯವಹಾರ ಮಾಡಿದ ಗ್ರಾಹಕರು ಹಾಗೂ ವ್ಯಾಪಾರಿಗೆ ಸದ್ಯದಲ್ಲೇ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ.ಡಿಜಿಟಲ್ ರೂಪದಲ್ಲಿ ವ್ಯವಹಾರ ಮಾಡಿದ ಗ್ರಾಹಕರು ಹಾಗೂ ವ್ಯಾಪಾರಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲು ಸರಕಾರ ಮುಂದಾಗಿದೆ.
ನೀತಿ ಆಯೋಗ ಸರಕಾರದ ಮುಂದೆ ಇಂತಹ ಒಂದು ಪ್ರಸ್ತಾವನೆಯನ್ನು ಇರಿಸಿದ್ದು, ಈ ಸಂಬಂಧ ಯೋಜನೆಯೊಂದರ ರೂಪುರೇಷೆ ಸಿದ್ಧಪಡಿಸುವಂತೆ ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಷನ್‌ಗೆ (ಎನ್‌ಪಿಸಿಐ) ಸೂಚಿಸಿದೆ.
ಡಿಜಿಟಲ್ ರೂಪದಲ್ಲಿಹಣ ಪಾವತಿ ಮಾಡಿದ ಎಲ್ಲಾಗ್ರಾಹಕರು ಹಾಗೂ ಡಿಜಿಟಲ್ ರೂಪದಲ್ಲಿಹಣ ಪಡೆದ ಎಲ್ಲವ್ಯಾಪಾರಿಗಳು ಈ ಬಹುಮಾನಕ್ಕೆ ಅರ್ಹರಾಗಿರುತ್ತಾರೆ. ವಾರಕ್ಕೊಮ್ಮೆ ಮತ್ತು 15 ದಿನಕ್ಕೊಮ್ಮೆ, ಇಲ್ಲಾ ತಿಂಗಳಿಗೊಮ್ಮೆ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು.
ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸುವ ಉದ್ದೇಶದ ಈ ಯೋಜನೆಗೆ ಸರಕಾರ ವಾರ್ಷಿಕ 125 ಕೋಟಿ ರೂ. ವೆಚ್ಚ ಮಾಡಲು ಸಿದ್ಧವಿದ್ದು, ಸದ್ಯದಲ್ಲೇ ಈ ಸಂಬಂಧ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.