ದೇಶ

ಜಯಲಲಿತಾಗೆ ಭಾರತ ರತ್ನ, ಸಂಸತ್'ನಲ್ಲಿ ಕಂಚಿನ ಪ್ರತಿಮೆಗೆ ಶಿಫಾರಸು: ತ.ನಾ ಸಚಿವ ಸಂಪುಟದ ನಿರ್ಣಯ

Manjula VN

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಹಾಗೂ ಸಂಸತ್ ಭವನದಲ್ಲಿ ಜಯಲಲಿತಾ ಅವರ ಕಂಚಿನ ಪ್ರತಿಮೆಯನ್ನು ಸ್ಫಾಪಿಸಬೇಕೆಂದು ತಮಿಳುನಾಡು ರಾಜ್ಯ ಸರ್ಕಾರ ಶನಿವಾರ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಜಯಲಲಿತಾ ಅವರ ನಿಧನದ ಬಳಿಕ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಒ. ಪನ್ನೀರ್ ಸೆಲ್ವಂ ಅವರು ನಿನ್ನೆ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು,

ಇದರಲ್ಲಿ ಜಯಲಲಿತಾ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ 'ಭಾರತ ರತ್ನ' ನೀಡಬೇಕು, ರಾಜಧಾನಿ ದೆಹಲಿಯ ಸಂಸತ್ ಆವರಣದಲ್ಲಿ ಜಯಲಲಿತಾ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ.

ಇದಲ್ಲದೆ, ಮರೀನಾ ಬೀಚ್ ನಲ್ಲಿರುವ ಎಂ.ಜಿ. ರಾಮಚಂದ್ರನ್ ಸ್ಮಾರಕದ ಹೆಸರನ್ನು ಡಾ.ಎಂಜಿಆಱ್ ಮತ್ತು ಪುರಚ್ಚಿ ತಲೈವಿ ಸೆಲ್ವಿ ಜಯಲಲಿತಾ ಸ್ಮಾರಕ ಎಂದು ಬದಲಾಯಿಸಬೇಕು. ಸ್ಮಾರಕಕ್ಕಾಗಿ ರು.15 ಕೋಟಿ ವ್ಯಯಿಸಬೇಕೆಂದು ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಕುರಿತಂತೆ ಸ್ವತಃ ಎಐಎಡಿಎಂಕೆ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ.

ಸಂಪುಟ ಸಭೆ ಆರಂಭಕ್ಕೂಮುನ್ನ ಜಯಲಲಿತಾ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು. ಜಯಾಲಲಿತಾ ಅವರು ಇದ್ದ ಸಂದರ್ಭದಲ್ಲಿ ಗರಿಷ್ಠ 15 ನಿಮಿಷಗಳ ನಡೆಯುತ್ತಿದ್ದ ಸಂಪುಟ ಸಭೆ ನಿನ್ನೆ 3 ಗಂಟೆಗಳ ಕಾಲ ನಡೆದಿರುವುದು ವಿಶೇಷವಾಗಿತ್ತು.

SCROLL FOR NEXT