ಸಂಗ್ರಹ ಚಿತ್ರ 
ದೇಶ

1996ರಲ್ಲಿ ಜಯಲಲಿತಾ ಸೋಲಿಗೆ ನಾನೇ ಕಾರಣನಾಗಿದ್ದೆ: ರಜನಿಕಾಂತ್

ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ಅವರ ಚುನಾವಣಾ ಸೋಲಿಗೆ ನಾನೇ ಕಾರಣನಾಗಿದ್ದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

ಚೆನ್ನೈ: ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ಅವರ ಚುನಾವಣಾ ಸೋಲಿಗೆ ನಾನೇ ಕಾರಣನಾಗಿದ್ದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

ಜಯಲಲಿತಾ ಅವರ ನಿಧನ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಕಲಾವಿದರ ಸಂಘದ ವತಿಯಿಂದ ಭಾನುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ರಜನಿಕಾಂತ್ ಅವರು 1996 ತಮಿಳುನಾಡು ವಿಧಾನಸಭಾ  ಚುನಾವಣೆಯನ್ನು ನೆನೆದರು. "1996ರ ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ಮತ್ತು ಅವರ ಪಕ್ಷದ ಸೋಲಿಗೆ ನಾನೂ ಕೂಡ ಕಾರಣನಾಗಿದ್ದೆ. ನಾನು ಜಯಾ ವಿರುದ್ಧ ನೀಡಿದ್ದ ಒಂದು ಹೇಳಿಕೆ ಜಯಲಲಿತಾರನ್ನು ತೀವ್ರ  ಕಳವಳಕ್ಕೆ ಈಡುಮಾಡಿತ್ತು ಎಂದು ಹೇಳಿದ್ದಾರೆ.

ಇಷ್ಟಾದರೂ ನಾನು ನನ್ನ ಮಗಳ ಮದುವೆ ಸಮಾರಂಭಕ್ಕಾಗಿ ಅವರನ್ನು ಆಹ್ವಾನಿಸಲು ಹೋಗಿದ್ದೆ. ನನ್ನ ಹೇಳಿಕೆಯಿಂದ ಜಯ ಲಲಿತಾ ಕೋಪಗೊಂಡಿರುತ್ತಾರೆ ಮದುವೆಗೆ ಬರಲು ನಿರಾಕರಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ  ಅದರೆ ನನ್ನ ಭೇಟಿಗೆ ಸಮಯ ನೀಡಿದ್ದಷ್ಟೇ ಆಹ್ವಾನ ಸ್ವೀಕರಿಸಿದ ಜಯಾ ಅಂದು ಕಾರ್ಯಕರ್ತರೊಬ್ಬರ ವಿವಾಹ ಕೂಡ ಅಂದೇ ಇದೆ. ಆದರೂ ಅಲ್ಲಿಗೂ ತೆರಳಿ ಬಳಿಕ ಮದುವೆಗೆ ಬರುವುದಾಗಿ ಆಶ್ವಾಸನೆ ನೀಡಿದರು ಮತ್ತು ನನ್ನ  ಮಗಳ ಮದುವೆಗೂ ಆಗಮಿಸಿ ಆಶೀರ್ವದಿಸಿದ್ದರು. ಅಂತಹ ಚಿನ್ನದಂತ ಮಹಿಳೆ ಜಯಲಲಿತಾ. ಅತಂಹ ನಾಯಕಿ ನಮ್ಮೊಂದಿಗಿಲ್ಲ. ಸೋಲನ್ನು ಜಯದ ಮೆಟ್ಟಿಲಾಗಿಸಿಕೊಂಡ ಧೀರಮಹಿಳೆ ಜಯಾ, ಪುರುಷ ಪ್ರಧಾನ ಸಮಾಜದ  ನಡುವೆಯೂ ಒತ್ತಡಗಳನ್ನು ಸಮರ್ಥವಾಗಿ ಎದುರಿಸಿ ವಜ್ರದಂತೆ ಹೊಳೆದರು. ಇದೀಗ ಎಂಜಿಆರ್ ಸಮಾಧಿ ಬಳಿ ಕೊಹಿನೂರ್ ವಜ್ರ ಶಾಶ್ವತ ನಿದ್ರೆಗೆ ಜಾರಿದ್ದಾರೆ ಎಂದು ರಜನಿಕಾತ್ ಹೇಳಿದರು.

1996ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ವೇಳೆ ಎಐಎಡಿಎಂಕೆ ಪಕ್ಷ ಹಾಗೂ ಜಯಲಲಿತಾ ಅವರ ವಿರುದ್ಧ ಮಾತನಾಡಿದ್ದ ರಜನಿಕಾಂತ್ ಅವರು "ಜಯಲಲಿತಾ ಅವರಿಗೆ ಅಧಿಕಾರ ನೀಡಿದರೆ ತಮಿಳುನಾಡನ್ನು ಆ  ದೇವರು ಕೂಡ ರಕ್ಷಿಸಲಾರ ಎಂದು ಹೇಳಿದ್ದರು. ಈ ಹೇಳಿಕೆ ಅಂದಿನ ಪರಿಸ್ಥಿತಿಯಲ್ಲಿ ವ್ಯಾಪಕ ಪರಿಣಾಮ ಬೀರಿತ್ತು. ಒಂದು ಅರ್ಥದಲ್ಲಿ ಈ ಹೇಳಿಕೆಯಿಂದಲೇ ಇಡೀ ಚುನಾವಣೆಯ ದಿಕ್ಕೇ ಬದಲಾಗಿ ಡಿಎಂಕೆ ಪಕ್ಷ ಗೆಲುವು ಸಾಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿಮಗೆ ಬುದ್ಧಿವಂತಿಕೆಯ ಕೊರತೆಯಿದ್ದರೆ AI ಬಗ್ಗೆ ಪೋಸ್ಟ್ ಮಾಡಬೇಡಿ: ರಾಹುಲ್ ಗೆ ಬಿಜೆಪಿ

ಚೀನಾದ ರೋಬೋಟ್ ಡಾಗ್ ವಿವಾದ: AI Summit expoದಿಂದ ಗಾಲ್ಗೋಟಿಯಾಸ್ ವಿವಿಗೆ ಸ್ಟಾಲ್ ತೆರವುಗೊಳಿಸಲು ಸೂಚನೆ-Video

'ಬರೀ ಸುಳ್ಳು.. ನಿಮ್ಮಿಂದಾಗಿ ಹೊಟೆಲ್ ನಲ್ಲಿ ಪಾತ್ರೆ ತೊಳೆಯಬೇಕಾಯಿತು': ಪಾಕ್ ವಿರುದ್ಧ ನಾಯಕ Shakeel Ammad Butt ಕಿಡಿ!

'ಅವರು ರಕ್ತದ ರುಚಿ ನೋಡಿದ್ದಾರೆ': PCB ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಪಾಕ್ ಮಾಜಿ ಪ್ರಧಾನಿ ಸೋದರಿಯರ ಗಂಭೀರ ಆರೋಪ

T20 World Cup 2026: ಭಾರತದ ವಿರುದ್ಧ ಪಂದ್ಯ ಆಡಲು 'Actual Hero' ಕಾರಣ; ವರಸೆ ಬದಲಿಸಿದ ಪಾಕಿಸ್ತಾನ!

SCROLL FOR NEXT