ದೇಶ

ತೆಲಂಗಾಣ: 32 ಲಕ್ಷ ರೂ ಮೌಲ್ಯದ ಹೊಸ ನೋಟುಗಳು ವಶಕ್ಕೆ

Srinivas Rao BV
ಹೈದರಾಬಾದ್: ತೆಲಂಗಾಣದಲ್ಲಿ 2,000 ರೂ ಮುಖಬೆಲೆಯ 32 ಲಕ್ಷ ರೂಪಾಯಿ ಮೊತ್ತದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 32 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದು 14 ಜನರನ್ನು ಬಂಧಿಸಲಾಗಿದೆ. 
ಮೊದಲ ಘಟನೆಯನ್ನು ತೆಲಂಗಾಣದ ಮೆದಕ್ ಜಿಲ್ಲೆಯ ರಮಾಯಂಪೇಟ್ ಎಂಬ ಪ್ರದೇಶದಲ್ಲಿ 16 ಲಕ್ಷ ರೂ ಮೊತ್ತದ 2,000 ರೂ ಮುಖಬೆಲೆಯ ಹೊಸ ನೋಟುಗಳನ್ನು ಕಾರು ತಪಾಸಣೆ ನಡೆಸುವ ವೇಳೆ ವಶಪಡಿಸಿಕೊಳ್ಳಲಾಗಿದೆ. ಹಣವನ್ನು ಭೂಮಿ ಖರೀದಿಸಲು ಹೈದರಾಬಾದ್ ಗೆ ರವಾನೆ ಮಾಡಾಲಾಗುತ್ತಿತ್ತು ಎಂದು ಕಾರು ಚಾಲಕ ಹಾಗೂ ಅತನ ಸಹಚರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಹಣವನ್ನು ವಶಪಡಿಸಿಕೊಂಡಿರುವ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಅದನ್ನು ಹಸ್ತಾಂತರಿಸಿದ್ದಾರೆ. ಇಂಥಹದ್ದೇ ಮತ್ತೊಂದು ಘಟನೆ ವಿಜಯವಾಡದಲ್ಲಿಯೂ ನಡೆದಿದ್ದು, 16 ಲಕ್ಷ ರೂ ಮೊತ್ತದ 2,000 ರೂ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. 
12 ಜನರ ತಂಡವೊಂದು ವಿಜಯವಾಡದಲ್ಲಿ ಬೃಹತ್ ಪ್ರಮಾಣದ ಹೊಸ ನೋಟುಗಳೊಂದಿಗೆ ಸಿಕ್ಕಿಬಿದ್ದಿದ್ದು, ಕಮಿಷನ್ ಪಡೆದು ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಲಾಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
SCROLL FOR NEXT