ದೇಶ

ನಗ್ರೊಟಾ ಸೇನಾ ಶಿಬಿರದ ದಾಳಿ ವೇಳೆ ಉಗ್ರರು ಸೈಲೆನ್ಸರ್ ಫಿಟ್ಟೆಡ್ ವೆಪನ್ ಬಳಸಿದ್ದರು: ವರದಿ

Sumana Upadhyaya
ಶ್ರೀನಗರ: ಕಳೆದ ತಿಂಗಳು ನಗ್ರೊಟಾದ ಸೇನಾ ಶಿಬಿರದ ಮೇಲೆ ನಡೆದ ದಾಳಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ತನಿಖೆ ಆರಂಭಿಸುತ್ತಿರುವ ಹೊತ್ತಿನಲ್ಲಿ, ದಾಳಿ ನಡೆಸಿದ ಉಗ್ರಗಾಮಿಗಳು ಆವರಣಕ್ಕೆ ಪ್ರವೇಶ ಪಡೆಯುವ ಮೊದಲು ಸೈನಿಕನನ್ನು ಕೊಲ್ಲಲು  ಶಬ್ದ ಶಾಮಕ ಶಸ್ತ್ರಾಸ್ತ್ರ(ಸೈಲೆನ್ಸರ್ ಫಿಟ್ಟೆಡ್ ವೆಪನ್)ನ್ನು ಬಳಸಿದ್ದರು ಎಂದು ತಿಳಿದುಬಂದಿದೆ.
ಇದು ದಾಳಿಗೂ ಮುನ್ನ ಆತ್ಮಹತ್ಯಾ ದಾಳಿಕೋರ(ಫಿಯಾದೀನ್) ಅಳವಡಿಸಿಕೊಂಡ ತಂತ್ರ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಹಿಂಭಾಗದಿಂದ ಸೇನಾ ಶಿಬಿರಕ್ಕೆ ಪ್ರವೇಶ ಪಡೆದ ನಂತರ ಒಬ್ಬ ಉಗ್ರಗಾಮಿ ಸೈಲೆನ್ಸರ್ ಫಿಟ್ಟೆಡ್ ಶಸ್ತ್ರದಿಂದ ಸೈನಿಕನ ಮೇಲೆ ಗುಂಡಿನ ದಾಳಿ ನಡೆಸಿದನು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಯೋಧ ಕುಸಿದುಬಿದ್ದುದನ್ನು ಒಬ್ಬರು ನೋಡಿದಾಗ ಸೇನಾ ಶಿಬಿರದಲ್ಲಿ ನೋವಿನ ಛಾಯೆ ದಟ್ಟವಾಗಿತ್ತು. ತಕ್ಷಣ ಅಲ್ಲಿ ಗುಂಡಿನ ದಾಳಿ ಆರಂಭವಾಯಿತು ಎನ್ನುತ್ತಾರೆ ತನಿಖಾಧಿಕಾರಿಗಳು.
SCROLL FOR NEXT