ನವದೆಹಲಿ: ಕೇಂದ್ರ ಸಚಿವ ಕಿರುಣ್ ರಿಜಿಜು ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುವವರಿಗೆ ಬೂಟಿನಿಂದ ಹೊಡೆಯಲಾಗುವುದು ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಬೃಹತ್ ಜಲ ವಿದ್ಯುತ್ ಘಟಕ ನಿರ್ಮಾಣವಾಗಲಿದ್ದು ಈ ಸಂಬಂಧ 450 ಕೋಟಿ ರುಪಾಯಿ ಭ್ರಷ್ಟಾಚಾರದಲ್ಲಿ ಕಿರಣ್ ರಿಜಿಜು ಅವರು ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಅಲ್ಲದೆ ಕಿರಣ್ ರಿಜಿಜು ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಆಡಿಯೋ ಸಾಕ್ಷ್ಯಗಳು ಲಭಿಸಿರುವುದರಿಂದ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ರಿಜಿಜು ಅವರು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರಿಗೆ ಬೂಟಿನಿಂದ ಒಡೆಯಲಾಗುವುದು ಎಂದು ಹೇಳಿದ್ದಾರೆ.
ಕಿರಣ್ ರಿಜಿಜು ಅವರ ಸಂಬಂಧಿ ಗೊಬೋಯಿ ರಿಜಿಜು ಎಂಬುವರು ಈ ಜಲ ವಿದ್ಯುತ್ ಘಟಕದ ಉಪ ಗುತ್ತಿಗೆದಾರರಾಗಿದ್ದಾರೆ. ಜಲ ವಿದ್ಯುತ್ ಯೋಜನೆಗಾಗಿ ಎರಡು ಅಣೆಕಟ್ಟುಗಳನ್ನು ನಿರ್ಮಿಸುತ್ತಿರುವ ರಾಜ್ಯ ಸರ್ಕಾರದ ನಿರ್ಮಿಸುತ್ತಿದೆ.