ದೇಶ

ಛಗನ್ ಭುಜ್ಬಲ್ ಜಾಮೀನು ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

Lingaraj Badiger
ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಮಾಜಿ ಸಚಿವ ಛಗನ್ ಭುಜ್ಬಲ್ ಅವರ ಜಾಮೀನು ಅರ್ಜಿಯನ್ನು ಬುಧವಾರ ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಛಗನ್ ಭುಜ್ಬಲ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜಿತ್ ಮೋರೆ ಹಾಗೂ ಶಾಲಿನಿ ಫನ್ಸಾಲ್ಕರ್ ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಜಾಮೀನು ಅರ್ಜಿಯನ್ನು ನಾವು ವಜಾಗೊಳಿಸುತ್ತಿದ್ದು, ನಂತರ ವಿಸ್ತೃತ ಆದೇಶ ನೀಡುವುದಾಗಿ ಹೇಳಿದ್ದಾರೆ.
ಕಳೆದ ಮಾರ್ಚ್ ನಿಂದ ನ್ಯಾಯಾಂಗ ಬಂಧನದಲ್ಲಿರುವ ಭುಜ್ಬಲ್ ಅವರು ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡುವಂತೆ ಕೋರಿದ್ದರು. ಅಲ್ಲದೆ ಜಾರಿ ನಿರ್ದೇಶನಾಲಯ ಕಾನೂನು ಬಾಹಿರವಾಗಿ ತನ್ನನ್ನು ಬಂಧಿಸಿದೆ ಎಂದು ಅರ್ಜಿಯಲ್ಲಿ ದೂರಿದ್ದರು.
ಸಾಲ ವಸೂಲಾತಿ ಮಂಡಳಿ (ಡಿಆರ್‌ಟಿ) 2010ರಲ್ಲಿ ನಡೆಸಿದ ಹರಾಜಿನಲ್ಲಿ 27 ಕೋಟಿ ರುಪಾಯಿ ಮೌಲ್ಯದ ಈ ಕಾರ್ಖಾನೆಯನ್ನು ಭುಜ್‌ಬಲ್‌ ಅವರ ಸಂಸ್ಥೆ ಖರೀದಿಸಿತ್ತು. ಉಪಮುಖ್ಯಮಂತ್ರಿಯಾಗಿದ್ದಾಗ ಭುಜ್‌ಬಲ್‌ ಅವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರು. ಅದನ್ನು ಅವರ ಕುಟುಂಬದ ಸದಸ್ಯರು ಈ ಆಸ್ತಿಗಳ ಖರೀದಿಗೆ ಬಳಸಿಕೊಂಡಿದ್ದರು ಎಂದು ಇ.ಡಿ. ಆರೋಪಿಸಿದೆ.
SCROLL FOR NEXT