ದೇಶ

ಏಪ್ರಿಲ್ 1 ರಿಂದ ಜಿಎಸ್ ಟಿ ಅನುಷ್ಠಾನಕ್ಕೆ ಸರ್ಕಾರದ ಪ್ರಯತ್ನ: ರಾಜನಾಥ್ ಸಿಂಗ್

Shilpa D

ನವದೆಹಲಿ: ಎಲ್ಲಾ ಎಡರು-ತೊಡರು, ಅಡಚಣೆಗಳನ್ನು ದಾಟಿ ಸರ್ಕಾರ ಏಪ್ರಿಲ್ 1 ರಿಂದ ಜಿಎಸ್ ಟಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ದೆಹಲಿಯಲ್ಲಿ ಅಸೋಚೋಮ್ ಏರ್ಪಡಿಸಿದ್ದ ಡಿಫೆನ್ಸ್ ಪ್ರೊಡಕ್ಷನ್ ಸಮಾವೇಶದಲ್ಲಿ ಮಾತನಾಡಿದ ಅವರು, ಏಪ್ರಿಲ್ 1 ರಿಂದ ಜಿಎಸ್ ಟಿ ಅನುಷ್ಠಾನಕ್ಕೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ. ಅದಕ್ಕೆ ಕೆಲವೊಂದು ಅಡಚಣೆಗಳಿವೆ, ಅವುಗಳಿಗೆಲ್ಲಾ ಪರಿಹಾರ ಕಂಡು ಹಿಡಿದು ಜಾರಿಗೊಳಿಸುತ್ತೇವೆ, ಜಿಎಸ್ ಟಿ ಜಾರಿಯಿಂದ ದೇಶದ ಜಿಡಿಪಿ ದರ ಶೇ. 1.75 ರಿಂದ ಶೇ. 2ಕ್ಕೇ ಏರುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಆದರೆ ಕಪ್ಪು ಹಣ ನಿಯಂತ್ರಣಕ್ಕಾಗಿ ಸರ್ಕಾರ ಏನೆಲ್ಲಾ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಎಲ್ಲಿಯ ರಾಜನಾಥ್ ಸಿಂಗ್ ಮಾತನಾಡಲಿಲ್ಲ.

ಮುಂದಿನ 10 ರಿಂದ 15 ವರ್ಷಗಳಲ್ಲಿ ಪ್ರಪಂಚದ ಮೂರು ಅತ್ಯುನ್ನತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಬಾರತದ ಹೆಸರನ್ನು ಸೇರಿಸಲು ಏನೇನು ಬೇಕೋ, ಆ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಕಪ್ಪು ಹಣ ನಿಯಂತ್ರಣಕ್ಕಾಗಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT