ಕರೋಲ್ ಬಾಗ್ ನಲ್ಲಿ ಪತ್ತೆಯಾದ ಹಣ 
ದೇಶ

ಮುಂದುವರೆದ ದಾಳಿ: ದೆಹಲಿ ಸಿಸಿಬಿಯಿಂದ 3.25 ಕೋಟಿ ಹಳೆಯ ನೋಟು ವಶ, ಐವರ ಬಂಧನ

ಕಪ್ಪುಹಣ ಕುರಿತಂತೆ ದೇಶಾದ್ಯಂತ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ದೆಹಲಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು 3.25 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತೆಯೇ ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದಾರೆ.

ನವದೆಹಲಿ: ಕಪ್ಪುಹಣ ಕುರಿತಂತೆ ದೇಶಾದ್ಯಂತ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ದೆಹಲಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು 3.25 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.  ಅಂತೆಯೇ ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದಾರೆ.

ಅಪಾರ ಪ್ರಮಾಣದ ಹಣ ಇರುವ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದೆಹಲಿಯ ಕರೋಲ್ ಬಾಗ್ ನಲ್ಲಿರುವ ಹೊಟೆಲ್ ತಕ್ಷ್ ಇಂಟರ್ ನ್ಯಾಷನಲ್ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಐವರನ್ನು ಬಂಧಿಸಿದ್ದಾರೆ.  ಅಂತೆಯೇ ಬಂಧಿಕರಿಂದ ಸುಮಾರು .325 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಮುಂಬೈ ಮೂಲದ ಅನ್ಸಾರಿ ಅಬುಝರ್, ಫಾಜಲ್ ಖಾನ್, ಅನ್ಸಾರಿ ಅಫನ್, ರಾಜಸ್ತಾನ ಮೂಲದ  ಲಡ್ಡುರಾಮ್ ಮತ್ತು ಜೋಧ್ಪುರದ ಮಹಾವೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಬಂಧಿರತನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಭಾರಿ ಪ್ರಮಾಣದ ಹಣ ಮುಂಬೈ ಮೂಲದ ಹವಾಲಾ ಏಜೆಂಟ್ ನದ್ದು ಎಂದು ತಿಳಿದುಬಂದಿದ್ದು, ಈತ ಪ್ಯಾಕೇಜಿಂಗ್ ಎಕ್ಸಪರ್ಟ್ ಎಂದು ಹೇಳಲಾಗುತ್ತಿದೆ. ಯಾವುದೇ  ವಸ್ತುವನ್ನು ವಿಮಾನ ನಿಲ್ದಾಣದ ಭದ್ರತಾ ಯಂತ್ರಗಳಲ್ಲಿ ಪತ್ತೆಯಾಗದಂತೆ ಪ್ಯಾಕ್ ಮಾಡುವುದೇ ಈತನ ಕೆಲಸವಂತೆ. ಹಣವಾಗಲೀ ಅಥವಾ ಯಾವುದೇ ರೀತಿಯ ವಸ್ತುಗಳಾಗಲಿ ಏರ್ ಪೋರ್ಟ್ ನಲ್ಲಿರುವ ಎಕ್ಸ್ ರೇ ಯಂತ್ರದಲ್ಲಿ  ಪತ್ತೆಯಾಗದಂತೆ ಏಈತ ಪ್ಯಾಕ್ ಮಾಡುತ್ತಾನೆ. ವಿಶಿಷ್ಟ ಟೇಪ್ ಗಳು ಹಾಗೂ ಕೆಲ ವೈರ್ ಗಳನ್ನು ಬಳಕೆ ಮಾಡಿ ಈ ರೀತಿ ವಿಶಿಷ್ಟವಾಗಿ ಪ್ಯಾಕ್ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT