ದೇಶ

ಭಾರತ ತಜಕಿಸ್ತಾನ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಲಿವೆ: ಪ್ರಣಬ್ ಮುಖರ್ಜಿ

Srinivas Rao BV
ನವದೆಹಲಿ: ಭಾರತ ಹಾಗೂ ತಜಕಿಸ್ತಾನ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವುದಕ್ಕೆ ಸಹಾಯ ಮಾಡಲು ಬದ್ಧವಾಗಿವೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ. 
" ನಮ್ಮ ಸಮಾನ ಮಿತ್ರ ರಾಷ್ಟ್ರ ಅಪ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾವು ಬದ್ಧರಾಗಿದ್ದೇವೆ, ಅಲ್ಲಿನ ಜನತೆಯ ಕನಸು ನನಸು ಮಾಡಲು ಹಾಗೂ ಶಾಂತಿ ನೆಲೆಸುವಂತೆ ಮಾಡಲು ಸಹಕರಿಸುತ್ತೇವೆ" ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ. 
ಭಾರತಕ್ಕೆ ಭೇಟಿ ನೀಡಿರುವ ತಜಕಿಸ್ತಾನದ ಅಧ್ಯಕ್ಷ ಎಮೋಮಲಿ ರಾಹ್‍ಮೋನ್ ಅವರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈ ಹೇಳಿಕೆ ನೀಡಿದ್ದಾರೆ.  ಭಾರತ-ತಜಕಿಸ್ತಾನ ದ್ವಿಪಕ್ಷೀಯ ಸಂಬಂಧದ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲೇ ಎಮೋಮಲಿ ರಾಹ್‍ಮೋನ್ ಭಾರತಕ್ಕೆ ಭೇಟಿ ನೀಡಿದ್ದಾರೆ. 
ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಭದ್ರತಾ ಸಹಕಾರವನ್ನು ಪರಿಣಾಮಕಾರಿಗೊಳಿಸಲು, ಭಯೋತ್ಪಾದನೆ ವಿರುದ್ಧ ಹೋರಾಡಲು ಎಮೋಮಲಿ ರಾಹ್ ಮೋನ್ ಭೇಟಿ ವೇಳೆ ಭಾರತ-ತಜಕಿಸ್ತಾನ ನಿರ್ಧರಿಸಿವೆ. 
SCROLL FOR NEXT