ನವದೆಹಲಿ: ಕೋರ್ಟ್ ಗಳು ಜೀವಾವಧಿ ಶಿಕ್ಷೆ ವಿಧಿಸುವಾಗ ‘ಕಠಿಣ’ ಎಂಬ ಪದ ಬಳಸಬಹುದೇ ಎಂಬುದನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಇರುವ ನ್ಯಾಯಾಲಯಗಳಿಗೆ ‘ಕಠಿಣ ಶಿಕ್ಷೆ’ ಎಂಬ ಪದ ಬಳಸಲು ಕಾನೂನು ಬದ್ಧವಾದ ಅಧಿಕಾರ ನೀಡಲಾಗಿದೆಯೇ ಎಂಬುದನ್ನು ನ್ಯಾಯಮೂರ್ತಿ ಪಿ. ಸಿ. ಘೋಷ್ ನೇತೃತ್ವದ ನ್ಯಾಯಪೀಠವು ಪರಿಶೀಲಿಸಲಿದೆ.
ಭಾರತೀಯ ದಂಡ ಸಂಹಿತೆ ಅಥವಾ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸುವಾಗ ‘ಕಠಿಣ’ ಎಂಬ ಪದ ಬಳಸಲು ಅವಕಾಶವಿಲ್ಲ ಎಂದು ಶಿಕ್ಷೆಗೆ ಒಳಗಾಗಿರುವ ರಾಂ ಕುಮಾರ್ ಸಿವಾರೆ ಪರ ವಕೀಲ ಪರಮಾನಂದ್ ಕಟಾರಾ ಅರ್ಜಿಯಲ್ಲಿ ವಾದಿಸಿದ್ದಾರೆ.
ಜೀವಾವಧಿ ಶಿಕ್ಷೆ ವಿಧಿಸುವಾಗ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಪದದ ಮೊದಲು ‘ಕಠಿಣ’ ಎಂಬ ಪದ ಬಳಸಲು ದಂಡನಾ ಕಾಯ್ದೆಗಳಲ್ಲಿ ಅವಕಾಶ ಇಲ್ಲದ ಕಾರಣ ಇದು ಸಂವಿಧಾನಬಾಹಿರ ಕ್ರಮ ಎಂಬುದು ಕಟಾರಾ ವಾದವಾಗಿದೆ.