ಶಿವಾಜಿ ಸ್ಮಾರಕ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ
ಮುಂಬೈ: ಮುಂಬೈನಲ್ಲಿ ಅಂದಾಜು 3600 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಛತ್ರಪತಿ ಶಿವಾಜಿ ಪ್ರತಿಮೆ ಹಾಗೂ ಸ್ಮಾರಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಭೂಮಿಪೂಜೆ ನೆರವೇರಿಸಿದ್ದಾರೆ.
ಮುಂಬೈಗೆ ನೀಡಿದ್ದ ಪ್ರಧಾನಿ, ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದ ಬಳಿಕ ಛತ್ರಪತಿ ಶಿವಾಜಿ ಪ್ರತಿಮೆ ಹಾಗೂ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠರ ಮನವೊಲಿಕೆ ಮಾಡಲು ಮುಂದಾಗಿರುವ ಬಿಜೆಪಿ ಸರ್ಕಾರ ಹಿಂದೂ ಮಹಾಸಾಗರದಲ್ಲಿ ಛತ್ರಪತಿ ಶಿವಾಜಿಯ ಸ್ಮಾರಕ ನಿರ್ಮಿಸಲು ರು.3,600 ಕೋಟಿ ಗಳ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಶಿವಾಜಿ ಸ್ಮಾರಕ ಹಾಗೂ ಬೃಹತ್ ಪ್ರತಿಮೆ ನಿರ್ಮಾಣವನ್ನು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮರಾಠ ಸಮುದಾಯದವರನ್ನು ಸಮಾಧಾನ ಪಡಿಸಲು ನಡೆಸಲಾಗಿರುವ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.
ಮರಾಠ ಸಮುದಾಯದವನ್ನು ಸಮಾಧಾನ ಪಡಿಸುವ ಬಿಜೆಪಿ ಪ್ರಯತ್ನವನ್ನು ಟೀಕಿಸಿರುವ ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಶಿವಾಜಿಯನ್ನು ಹೈಜಾಕ್ ಮಾಡಿದೆ ಎಂದು ಆರೋಪಿಸಿದೆ. ಶಿವಾಜಿ ಸ್ಮಾರಕ ಹಾಗೂ ಪ್ರತಿಮೆ ನಿರ್ಮಾಣ ಪ್ರತಿಯೊಬ್ಬ ಮರಾಠಿಯ ಕನಸು ಎಂಬುದನ್ನು ಬಿಜೆಪಿ ಮರೆಯಬಾರದು. ಈ ಹಿಂದಿನ ಎನ್ ಸಿ ಪಿ ಸರ್ಕಾರ ಸಹ ಸ್ಮಾರಕ ನಿರ್ಮಾಣ ಮಾಡಲು ಯತ್ನಿಸಿತ್ತು. ಆದರೆ ಅನೇಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಸರ್ಕಾರದ ವೆಚ್ಚದಲ್ಲಿ ಶಿವಾಜಿಯವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮೈತ್ರಿಕೂಟದ ಎಲ್ಲಾ ಪಕ್ಷಗಳನ್ನೂ ಸಮಾನ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಶಿವಸೇನೆ ಬಿಜೆಪಿಯನ್ನು ಒತ್ತಾಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics