ಮಲಪ್ಪುರಂ: ಕೇರಳದ ತಿರುರ್ ಪೊಲೀಸರು ಶನಿವಾರ ಅಕ್ರಮವಾಗಿ ಸಂಗ್ರಹಿಸಿದ್ದ 34 ಲಕ್ಷ ರುಪಾಯಿ ಮೌಲ್ಯದ 2000 ರುಪಾಯಿ ನೋಟ್ ಸೇರಿದಂತೆ ಒಟ್ಟು 40 ಲಕ್ಷ ರುಪಾಯಿ ಜಪ್ತಿ ಮಾಡಿದ್ದಾರೆ.
ಅಕ್ರಮ ಹಣ ಸಂಗ್ರಹಿಸಿದ್ದ ಹವಾಲ ಡೀಲರ್ 34 ವರ್ಷದ ಸನಿಶ್ ಬಾಬು ಹಾಗೂ ಆತನ ಸಹಚರ ಶೌಕತ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಮೊದಲು 54 ವರ್ಷದ ಶೌಕತ್ ಅಲಿಯನ್ನು ಬಂಧಿಸಿದ್ದು, ನಂತರ ಸನಿಶ್ ಬಾಬುನನ್ನು ವಶಕ್ಕೆ ಪಡೆದಿದ್ದಾರೆ.