ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

20 ಸಾವಿರ ಎನ್​ಜಿಒಗಳ ಎಫ್ ಸಿಆರ್ ಎ ಲೈಸೆನ್ಸ್ ರದ್ದು

ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ದೇಶದ 33,000 ಸರ್ಕಾರೇತರ ಸಂಸ್ಥೆಗಳ(ಎನ್​ಜಿಒ) ಪೈಕಿ 20,000 ಎನ್​ಜಿಒ ಗಳ ವಿದೇಶೀ...

ಸಂಸತ್ ಭವನ
Lingaraj Badiger
Updated On : 27 Dec 2016, 7:47 am
ನವದೆಹಲಿ: ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ದೇಶದ 33,000 ಸರ್ಕಾರೇತರ ಸಂಸ್ಥೆಗಳ(ಎನ್​ಜಿಒ) ಪೈಕಿ 20,000 ಎನ್​ಜಿಒ ಗಳ ವಿದೇಶೀ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್​ಸಿಆರ್​ಎ) ಪರವಾನಿಗಗಳನ್ನು ಸರ್ಕಾರ ಮಂಗಳವಾರ ರದ್ದು ಪಡಿಸಿದೆ.
ದೇಶದಲ್ಲಿ ಪ್ರಸ್ತೂತ 13,000 ಎನ್​ಜಿಒಗಳು ಮಾತ್ರ ಕಾನೂನು ಬದ್ಧವಾಗಿದ್ದು, ಅಸಮರ್ಪಕ ದಾಖಲಾತಿಗಳಿಗಾಗಿ 20,000 ಎನ್​ಜಿಒಗಳ ಪರವಾನಗಿಗಳನ್ನು ರದ್ದು ಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗಷ್ಟೆ ಸಾಮಾಜಿಕ ಕಾರ್ಯಕರ್ತೆ ಶಬನಮ್ ಹಶ್ಮಿ ನಡೆಸುವ ಎನ್​ಜಿ ಒ ಸೇರಿದಂತೆ 7 ಎನ್​ಜಿಒಗಳನ್ನು ವಿದೇಶೀ ಹಣ ಸ್ವೀಕರಿಸದಂತೆ ಸರ್ಕಾರ ನಿಷೇಧಿಸಿತ್ತು. ಬಳಿಕ ಗುಪ್ತಚರ ದಳದ ಪ್ರತಿಕೂಲ ವರದಿಗಳನ್ನು ಆಧರಿಸಿ ಅವುಗಳ ಎಫ್​ಸಿಆರ್​ಎ ಪರವಾನಗಿಗಳನ್ನು ರದ್ದು ಪಡಿಸಲಾಗಿದೆ. ಇತ್ತೀಚೆಗೆ ಎಫ್​ಸಿಆರ್​ಎ ಪರವಾನಗಿಗಳನ್ನು ನವೀಕರಿಸಿದ ಸಂಸ್ಥೆಗಳ ಕಾರ್ಯ ನಿರ್ವಹಣೆ ಬಗ್ಗೆ ತನಿಖೆ ನಡೆಸಿದ ಬಳಿಕ ಗೃಹ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ.

Advertisement

Advertisement

ವಿದೇಶೀ ನಿಧಿ ಬಳಸಿ ಸರ್ಕಾರವನ್ನು ‘ದಲಿತ ವಿರೋಧಿ’ ಎಂಬುದಾಗಿ ವಿದೇಶಗಳಲ್ಲಿ ಪ್ರಚುರ ಪಡಿಸುವುದು ಹಾಗೂ ಸಾರ್ವಜನಿಕ ಹಿತಕ್ಕೆ ವಿರುದ್ಧವಾದ ಕೆಲಸಗಳನ್ನು 7 ಎನ್​ಜಿಒಗಳು ನಡೆಸುತ್ತಿವೆ ಎಂದು ಗುಪ್ತಚರ ವರದಿಗಳು ತಿಳಿಸಿದ್ದವು. ಈ ಹಿನ್ನೆಲೆಯಲ್ಲಿ ಕೆಂಡಾಮಂಡಲವಾಗಿದ್ದ ಗೃಹ ಇಲಾಖೆ ಎನ್​ಜಿಒಗಳ ವಿಚಾರದಲ್ಲಿ ಇನ್ನಷ್ಟು ತನಿಖೆ ಕೈಗೊಂಡಿತ್ತು. 
ಡಿಸೆಂಬರ್ 14ರಂದು ಸರ್ಕಾರ ತೀಸ್ತಾ ಸೆಟಲ್ವಾಡ್ ನಡೆಸುತ್ತಿದ್ದ ಸಬ್ರಂಗ್ ಟ್ರಸ್ಟ್ ಮತ್ತು ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್ ಹೆಸರಿನ ಎನ್​ಜಿಒ ಹಾಗೂ ಗ್ರೀನ್ ಪೀಸ್ ಇಂಡಿಯಾ ಎನ್​ಜಿಒಗಳ ಎಫ್​ಸಿಆರ್​ಎ ಲೈಸೆನ್ಸ್ ನವೀಕರಣವನ್ನು ರದ್ದು ಪಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments