ನವಾಜ್ ಷರೀಫ್ - ನರೇಂದ್ರ ಮೋದಿ 
ದೇಶ

ಮೋದಿ ಪಾಕ್ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ಅಗತ್ಯ ಇರಲಿಲ್ಲ: ಶಿವಸೇನೆ

ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ...

ನವದೆಹಲಿ: ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ. ನಮ್ಮ ನಡುವಿನ ಸಂಬಂಧವೂ ಸರಿ ಇಲ್ಲ, ಹೀಗಿರುವಾಗ ಶರೀಫ್ ಅವರಿಗೆ ಶುಭ ಹಾರೈಸುವ ಅಗತ್ಯ ಇರಲಿಲ್ಲ ಎಂದು ಹೇಳಿದೆ.
ಪ್ರಧಾನಿ ಮೋದಿ ಅವರು ಇತ್ತೀಚಿಗಷ್ಟೇ ಮಹಾರಾಷ್ಟ್ರದಲ್ಲಿ ಶಿವಾಜಿ ಶಿಲಾಸ್ಮಾರಕಕ್ಕೆ ಶಂಕು ಸ್ಥಾಪನೆ ಮಾಡಿದಾಗ ಅಲ್ಲಿ ನೆರೆದಿದ್ದ ಬಿಜೆಪಿ ಬೆಂಬಲಿಗರು 'ಮೋದಿ ಮೋದಿ' ಎಂದು ಜೈಕಾರ ಕೂಗಿದ್ದರು, ಪ್ರಸ್ತುತ ಸಮಾರಂಭದಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡಾ ಭಾಗವಹಿಸಿದ್ದರು.ಆದಾಗ್ಯೂ, ಶಿವಾಜಿ ಸ್ಮಾರಕದ ಶಂಕು ಸ್ಥಾಪನೆ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮವಲ್ಲ ಎಂದು ಶಿವಸೇನೆ ಗುಡುಗಿತ್ತು.
ಛತ್ರಪತಿ ಶಿವಾಜಿ ಅವರು ತಮ್ಮ ಶತ್ರುಗಳೆ ಯಾವತ್ತೂ ಇಂತಹ ಶುಭಾಶಯ ಕೋರಿಲ್ಲ. ಸ್ವರಾಜ್ಯದ ಶತ್ರುಗಳೆಲ್ಲವೂ ದೇಶದ ಶತ್ರುಗಳು ಎಂದು ಶಿವಾಜಿ ಮಹಾರಾಜರು ಪರಿಗಣಿಸಿದ್ದರು. ಶಿವಾಜಿ ಅವರು ಯಾವತ್ತೂ ಔರಂಗಜೇಬ್, ಅಫ್ಜಲ್ ಖಾನ್, ಶಯಿಸ್ತಾ ಖಾನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಿಲ್ಲ ಎಂದು ಶಿವಸೇನೆ ತಮ್ಮ ಮುಖವಾಣಿ ಸಾಮ್ನಾದಲ್ಲಿ ಬರೆದಿದೆ.
ಶಿವಾಜಿ ಸ್ಮಾರಕದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮೋದಿ ಜಲ ಪೂಜೆ ಮಾಡಿದಾಗ, ತಮ್ಮ ಕಾರ್ಯಕ್ರಮವನ್ನು ಬಿಜೆಪಿ ಹೈಜಾಕ್ ಮಾಡುತ್ತಿದೆ ಎಂಬ ಭಾವನೆ ಶಿವಸೇನೆ ಮುಖಂಡರಿಗೆ ಮೂಡಿದ್ದು, ಅದನ್ನು ಅವರು ವ್ಯಕ್ತ ಪಡಿಸಿದ್ದರು.
ಛತ್ರಪತಿ ಶಿವಾಜಿಯವರ ಹೆಸರನ್ನು ರಾಜಕೀಯಕ್ಕೆ ಬಳಸುವ ಅಗತ್ಯವಿಲ್ಲ. ಅವರ ಹೆಸರನ್ನು ಹಾಗೆ ಬಳಸಿಕೊಂಡವರು ಉದ್ಧಾರವಾಗಲ್ಲ, ಇತಿಹಾಸ ಏನೆಂಬುದನ್ನು ಮೊದಲಿ ತಿಳಿಯಲಿ ಎಂದಿದೆ.
ರಾಜಕೀಯ ಸ್ವಾರ್ಥಕ್ಕಾಗಿ ಶಿವಾಜಿ ಸ್ಮಾರಕ ಬಳಕೆಯಾಗದೇ ಇರಲಿ, ಸ್ವಾರ್ಥ ರಾಜಕಾರಣಿಗಳ ವಿರುದ್ಧ ಶಿವಾಜಿ ಮಹಾರಾಜರ ಖಡ್ಗ ಮಾತನಾಡುವಂತೆ ಮಾಡಬೇಡಿ ಎಂದು ಶಿವಸೇನೆ ಸಂಪಾದಕೀಯದಲ್ಲಿ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!