ಮಾರಾಮಾರಿ ವೇಳೆ ಗಂಭೀರವಾಗಿ ಗಾಯಗೊಂಡಿರುವ ಉಚ್ಛಾಟಿತ ಸಂಸದೆ ಶಶಿಕಲಾ ಪುಷ್ಪ ಅವರ ಪತಿಯನ್ನು ಕರೆದುಕೊಂಡು ಹೋಗುತ್ತಿರುವ ಪೊಲೀಸರು 
ದೇಶ

ಉತ್ತರಾಧಿಕಾರಿ ಕಲಹ ಸ್ಫೋಟ: ಎಐಎಡಿಎಂಕೆ 2 ಬಣಗಳ ನಡುವೆ ಮಾರಾಮಾರಿ, ಹಲವರಿಗೆ ಗಾಯ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದ ಬಳಿಕ ಉತ್ತರಾಧಿಕಾರಕ್ಕಾಗಿ ಎಐಎಡಿಎಂಕೆ ಪಕ್ಷದಲ್ಲಿ ಕಲಹ ಸ್ಫೋಟಗೊಂಡಿದ್ದು, ಎಐಎಡಿಎಂಕೆ ಕಚೇರಿಯ ಹೊರಗೆ 2 ಬಣಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ...

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದ ಬಳಿಕ ಉತ್ತರಾಧಿಕಾರಕ್ಕಾಗಿ ಎಐಎಡಿಎಂಕೆ ಪಕ್ಷದಲ್ಲಿ ಕಲಹ ಸ್ಫೋಟಗೊಂಡಿದ್ದು, ಎಐಎಡಿಎಂಕೆ ಕಚೇರಿಯ ಹೊರಗೆ 2 ಬಣಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬುಧವಾರ ನಡೆದಿದೆ.

ನಾಳೆ ಎಐಎಡಿಎಂಕೆ ಪಕ್ಷದ ಕೌನ್ಸಿಲ್ ಸಭೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಲು ಉಚ್ಛಾಟಿತ ರಾಜ್ಯಸಭಾ ಸಂಸದೆ ಶಶಿಕಲಾ ಅವರು ಬೆಂಬಲಿಗರು, ಪತಿ ಹಾಗೂ ನಾಲ್ವರು ವಕೀಲರೊಂದಿಗೆ ಬಂದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪಕ್ಷದ ಕೆಲ ಕಾರ್ಯಕರ್ತರೊಂದಿಗೆ ವಾಗ್ವಾದಗಳು ಆರಂಭವಾಗಿದೆ. ನಂತರ ಈ ಮಾತಿನ ಚಕಮಕಿಗಳು ಮಾರಾಮಾರಿಗೆ ಹೋಗಿದೆ. ಎರಡು ಬಣಗಳ ನಡುವೆ ನಡೆದ ಮಾರಾಮಾರಿ ವೇಳೆ ಹಲವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ನಾಳೆ ಸಭೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪತ್ರವೊಂದನ್ನು ಸಲ್ಲಿಸುವ ಸಲುವಾಗಿ ಪುಷ್ಪ ಅವರ ವಕೀಲರು ಆಗಮಿಸಿದ್ದರು. ಈ ವೇಳೆ ಶಶಿಕಲಾ ಪುಷ್ಪ ಅವರ ವಕೀಲರು ಹಾಗೂ ಪತಿ ಮೇಲೆ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. 2 ಬಣಗಳ ನಡುವೆ ಮಾರಾಮಾರಿ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹೊಡೆದಾಟ ನಿಲ್ಲಿಸಲು ಹರಸಾಹಸ ಪಡಬೇಕಾಯಿತು.

ಆಗಸ್ಟ್ ತಿಂಗಳಿನಲ್ಲಿ ಸ್ಲ್ಯಾಪ್ ಗೇಟ್ ಘಟನೆಯ ಬಳಿಕ ಪಕ್ಷದ ವರ್ಚಸ್ಸಿಗೆ ಹಾನಿಯುಂಟು ಮಾಡುತ್ತಿದ್ದಾರೆಂದು ಹೇಳಿ ಶಶಿಕಲಾ ಪುಷ್ಪ ಅವರನ್ನು ಎಐಡಿಎಕೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ಘಟನೆ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಶಶಿಕಲಾ ಪುಷ್ಪ ಅವರು, ಸ್ಥಾನದಿಂದ ನನ್ನನ್ನು ಅಮಾನತು ಮಾಡಲಾಗಿತ್ತೇ ವಿನಃ ಪಕ್ಷದಿಂದಲೇ ಹೊರಹಾಕಿಲ್ಲ. ಹೀಗಾಗಿ ನಾಳೆ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲು ನನಗೆ ಅನುಮತಿ ನೀಡಬೇಕಿದೆ ಎಂದು ಹೇಳಿದ್ದಾರೆ.

ಶಶಿಕಲಾ ನಟರಾಜನ್ ಹಾಗೂ ಅವರ ಕುಟುಂಬಸ್ಥರು ಜಯಲಲಿತಾ ಅವರನ್ನು ಸಾಯಿಸಿದ್ದಾರೆಂದು ಸಾಕಷ್ಟು ಜನರು ಹೇಳುತ್ತಿದ್ದಾರೆ. ಹೀಗಾಗಿ ಪ್ರಕರಣ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕಿದೆ. ನನ್ನ ವಕೀಲರ ಮೇಲೆ ದಾಳಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ.

ಶಶಿಕಲಾ ನಟರಾಜನ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕಿದೆ. ಶಶಿಕಲಾ ಅವರಿಗೆ ಜನರು ಆ ಸ್ಥಾನವನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

ಎಐಎಡಿಎಂಕೆ ನಾಯಕಿ ಸಿ.ಆರ್ ಸರಸ್ವತಿ ಅವರು ಮಾತನಾಡಿ, ಶಶಿಕಲಾ ಪುಷ್ರ ಅವರು ಪಕ್ಷದಲ್ಲಿಲ್ಲ. ಹೀಗಾಗಿ ಪಕ್ಷದ ಪ್ರಧಾನ ಕಚೇರಿ ಬಳಿ ಬರಲು ಅವರಿಗೆ ಯಾವುದೇ ಹಕ್ಕಿಲ್ಲ. ಅಮ್ಮ (ಜಯಲಲಿತಾ) ಅವರು ಬದುಕಿದ್ದ ಸಂದರ್ಭದಲ್ಲಿ ಅವರ ಬಗ್ಗೆ ಶಶಿಕಲಾ ಅವರು ಕೆಟ್ಟದಾಗಿ ಹೇಳಿಕೆಯನ್ನು ನೀಡಿದ್ದರು. ಪಕ್ಷದ ಪ್ರಧಾನ ಕಚೇರಿ ಬಳಿ ಬರಲು ಶಶಿಕಲಾ ಪುಷ್ಪ ಅವರು ಯಾರು? ಪಕ್ಷದಲ್ಲಿರುವ ಶೇ.99 ರಷ್ಟು ಜನರಿಗೆ ಪಕ್ಷವನ್ನು ನಡೆಸಲು ಚಿನ್ನಮ್ಮ (ಶಶಿಕಲಾ ನಟರಾಜನ್) ಅವರನ್ನೇ ಸೂಚಿಸುತ್ತಿದ್ದಾರೆ. ನಾಳೆ ಕೌನ್ಸಿಲ್ ಸಭೆ ನಡೆಯುತ್ತಿರುವುದರಿಂದಾಗಿ ಶಶಿಕಲಾ ಪುಷ್ಪ ಅವರು ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT