ದೇಶ

ನೋಟು ನಿಷೇಧದ ಎಫೆಕ್ಟ್: ಕಂತುಗಳಲ್ಲಿ ಲಂಚ ಸ್ವೀಕರಿಸುತ್ತಿರುವ ಭ್ರಷ್ಟ ಅಧಿಕಾರಿಗಳು!

Srinivas Rao BV
ನವದೆಹಲಿ: ನೋಟು ನಿಷೇಧದ ನಂತರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ನೋಟು ನಿಷೇಧವಾದರೂ ಅಧಿಕಾರಿಗಳು ಲಂಚ ಸ್ವೀಕರಿಸುವುದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ಲಂಚವನ್ನೂ ಕಂತಿನಲ್ಲಿ ಪಾವತಿ ಮಾಡುವುದು. 
ಕಂತುಗಳಲ್ಲಿ ಲಂಚ ಸ್ವೀಕರಿಸುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ ಅಧಿಕಾರಿ ಸಿಬಿಐ ಬಲೆಗೆ ಬಿದ್ದಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಆದಾಯ ತೆರಿಗೆ ಅಧಿಕಾರಿಯಾಗಿರುವ ಬಿ ಶ್ರೀನಿವಾಸ ರಾವ್  ಬಿಲ್ಡರ್ ನಿಂದ 1.5 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ 500, 1000 ರೂ ನೋಟು ನಿಷೇಧದಿಂದ ಒಂದೇ ಬಾರಿಗೆ 1.5 ಲಕ್ಷ ರೂಪಾಯಿ ಮೊತ್ತವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಂತುಗಳಲ್ಲಿ ಲಂಚ ಪಾವತಿಸುವಂತೆ ಆದಾಯ ತೆರಿಗೆ ಅಧಿಕಾರಿ ಯತ್ನಿಸಿದ್ದರು. 30,000 ರೂ ಮೊತ್ತದ ಮೊದಲ ಕಂತಿನ ಲಂಚ ಸ್ವೀಕರಿಸುತ್ತಿದ್ದಾಗ ಅಧಿಕಾರಿ ಸಿಬಿಐಗೆ ಸಿಕ್ಕಿಬಿದ್ದಿದ್ದಾರೆ. ದಾಳಿ ನಡೆಸಿದ ವೇಳೆ ಮಹತ್ವದ ದಾಖಲೆಗಳು ಹಾಗೂ 2.03 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ. 
SCROLL FOR NEXT