ದೇಶ

ಸಂದೇಹ, ಅಸಮ್ಮತಿ ಮತ್ತು ವಿವಾದಗಳ ಬೌದ್ಧಿಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಬೇಕು: ರಾಷ್ಟ್ರಪತಿ

Vishwanath S
ತಿರುವನಂತಪುರಂ: ಸಂದೇಹ, ಅಸಮ್ಮತಿ ಮತ್ತು ವಿವಾದಗಳ ಬೌದ್ಧಿಕ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಕಾಪಾಡಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದಾರೆ. 
ಭಾರತೀಯ ಇತಿಹಾಸ ಕಾಂಗ್ರೆಸ್ನ 77ನೇ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಣಬ್ ಮುಖರ್ಜಿ ಅವರು, ಇತಿಹಾಸದ ವಸ್ತುನಿಷ್ಠ ಅನ್ವೇಷಣೆಯಲ್ಲಿ ನ್ಯಾಯಾಧೀಶರ ನಿಷ್ಪಕ್ಷಪಾತ ಮನಸ್ಸಿರಬೇಕೆ ಹೊರತು ವಕೀಲರ ಮನಸ್ಸಿರಬಾರದು. ನಾವು ನಮ್ಮ ಕಣ್ಣುಗಳನ್ನು ಪರಿಚಯವಿಲ್ಲದ ವಿಚಾರಗಳನ್ನು ತಿಳಿಯಲು ಮುಕ್ತ ಇರಿಸಿಕೊಳ್ಳಬೇಕು ಮತ್ತು ವಿವಿಧ ತೀರ್ಮಾನಗಳನ್ನು ಅಥವಾ ಕಲ್ಪನೆಗಳ ವ್ಯಾಪ್ತಿಯನ್ನು ಪರಿಗಣಿಸಲು ಸಿದ್ಧ ಇರಬೇಕು ಎಂದರು. 
ಭಾರತ ಬಹು ಸಾಂಸ್ಕೃತಿಕತೆ, ಸಾಮಾಜಿಕ, ಸಾಂಸ್ಕೃತಿಕ, ಭಾಷಾ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಹೊಂದಿದ್ದು ಅವುಗಳನೇ ನಮ್ಮ ದೊಡ್ಡ ಶಕ್ತಿಯಾಗಿದೆ ಎಂದರು.
SCROLL FOR NEXT