ದೇಶ

ಗುಜರಾತ್ ಗ್ರಾಮ ಪಂಚಾಯ್ತಿ ಚುನಾವಣೆ: ಪಕ್ಷಕ್ಕೆ ಭರ್ಜರಿ ಜಯ- ರಾಜ್ಯ ಬಿಜೆಪಿ ಘಟಕ

ಗುಜರಾತ್ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು ಬಿಜೆಪಿ ಶೇಖಕ 80 ರಷ್ಟು ಸೀಟುಗಳನ್ನು ಗಳಿಸಲಿದೆ ಎಂದು ಬಿಜೆಪಿ ಹೇಳಿದೆ...

ಅಹಮದಾಬಾದ್: ಗುಜರಾತ್ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು ಬಿಜೆಪಿ ಶೇಖಕ 80 ರಷ್ಟು ಸೀಟುಗಳನ್ನು ಗಳಿಸಲಿದೆ ಎಂದು ಬಿಜೆಪಿ ಹೇಳಿದೆ. 
ಮತ ಎಣಿಕೆ ಕುರಿತಂತೆ ಗುಜರಾತ್ ನ ಬಿಜೆಪಿ ಘಟಕ ಬಿಜೆಪಿ ಪಕ್ಷ 80.12ರಷ್ಟು ಸೀಟುಗಳನ್ನು ಪಡೆದು ಅಧಿಕಾರ ನಡೆಸಲಿದೆ ಎಂದು ಟ್ವೀಟ್ ಮಾಡಿದೆ. 
ಕಳೆದ ವರ್ಷದ ಚುನಾವಣೆಯಲ್ಲಿ ಬಿಜೆಪಿ 77 ರಷ್ಟು ಮತಗಳನ್ನು ಪಡೆದಿದ್ದು ಆದರೆ ಈ ಬಾರಿ ಶೇಖಡ 80ರಷ್ಟು ಸೀಟುಗಳನ್ನು ಪಡೆಯಲಿದೆ. 
ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯ್ತಿ ಮತ ಎಣಿಕೆ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದು ಈ ಬಾರಿ ನರ್ಮದ ಜಿಲ್ಲೆಯಲ್ಲಿ ಶೇಖಕ 87.45ರಷ್ಟು ಮತದಾನವಾಗಿದ್ದರೆ. ಬಾವ್ನಗರ್ ಶೇಖಡ 70.47ರಷ್ಟು ಮತದಾನವಾಗಿದ್ದು ಇದು ಅಲ್ಪ ಮಟ್ಟದ ಮತದಾನವಾಗಿದೆ. 
ಗುಜರಾತ್ ನಾದ್ಯಂತ 53,116 ವಾರ್ಡ್ ಗಳಿಂದ 1.20 ಲಕ್ಷ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇನ್ನು 8,527 ಸರ್ಪಂಚ ಸೀಟುಗಳಿಗೆ 26,800 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!