ದೇಶ

ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪನ ಭಕ್ತನೊಂದಿಗೆ ಸುಮಾರು 600 ಕಿ.ಮೀ ನಡೆದ ಶ್ವಾನ

Vishwanath S
ಕೋಳಿಕೋಡ್: ಕಾಲ್ನಡಿಗೆ ಮೂಲಕ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದ ನವೀನ್ ಎಂಬ ಅಯ್ಯಪ್ಪನ ಭಕ್ತನಿಗೆ ಬೀದಿ ನಾಯಿಯೊಂದು ಸಾಥ್ ನೀಡಿದ್ದು ಬರೋಬ್ಬರಿ 600 ಕಿಮೀ ದೂರ ನಡೆದಿದೆ. 
ಕೇಳರದ ಕೋಳಿಕೋಡ್ ಮೂಲದವರಾದ 38 ವರ್ಷದ ನವೀನ್ ಡಿಸೆಂಬರ್ 7 ರಂದು ಪಾದಯಾತ್ರೆ ಕೈಗೊಂಡರು. ಡಿಸೆಂಬರ್ 8ರಂದು ಬೀದಿ ನಾಯಿ ತನ್ನನ್ನು ಹಿಂಬಾಲಿಸುವುದನ್ನು ಗಮನಿಸಿದ ನವೀನ್ ಅದನ್ನು ಓಡಿಸಲು ಮುಂದಾದರು ಆದರೆ ಎಷ್ಟು ಬಾರಿ ಪ್ರಯತ್ನಿಸಿದರು ಅದು ಅವರನ್ನು ಬಿಟ್ಟು ಹೋಗಿಲ್ಲವಂತೆ.
17 ದಿನಗಳ ಕಾಲ 600 ಕಿಮೀ ಪಾದಯಾತ್ರೆ ಮುಗಿಸಿದ್ದ ನವೀನ್ ಡಿಸೆಂಬರ್ 23ರಂದು ಶಬರಿಮಲೆಯಿಂದ ಹಿಂತಿರುಗುತ್ತಿದ್ದಾಗ ಸಹ ಶ್ವಾನ ಅವರನ್ನು ಹಿಂಬಾಲಿಸಿದೆ. ಅಲ್ಲದೆ ಕೆಎಸ್ಆರ್ಟಿಸಿ ಬಸ್ ನಲ್ಲಿ ಇವರ ಪಕ್ಕದಲ್ಲೇ ಕುಳಿತುಕೊಂಡಿದೆ. ಶ್ವಾನ ಪ್ರೀತಿಯನ್ನು ಕಂಡ ನವೀನ್ ಅದನ್ನು ಮನೆಗೆ ತಂದು ಅದಕ್ಕೆ ಮಾಲು ಎಂದು ಹೆಸರಿಟ್ಟು ಪೋಷಿಸುತ್ತಿದ್ದಾರೆ. 
ಕೇರಳ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ನವೀನ್ ಕೆಲಸ ಮಾಡುತ್ತಿದ್ದಾರೆ. ತನ್ನೊಂದಿಗೆ 600 ಕಿಮೀ ನಡೆದ ಶ್ವಾನದ ಬಗ್ಗೆ ನವೀನ್ ಹೆಮ್ಮೆ ಪಟ್ಟಿದ್ದಾರೆ.
SCROLL FOR NEXT