ನವದೆಹಲಿ: ಕಿಡ್ನಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ ಅಮೆರಿಕಾದಲ್ಲಿರುವ ಭಾರತೀಯ ಪ್ರಜೆ ರೋಹನ್ ಷಾ ಗೆ ಸಹಾಯ ಮಾಡಿದ್ದಾರೆ.
ಅಮೆರಿಕಾದಲ್ಲಿರುವ ರೋಹನ್ ಷಾ ತಮ್ಮ ತಂದೆ ನಿಧನರಾದ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಲು ತುರ್ತು ವೀಸಾ ಪಡೆಯಬೇಕಿತ್ತು. ತುರ್ತು ವೀಸಾಗಾಗಿ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟರ್ ಮೂಲಕ ಮನವಿಯನ್ನೂ ಸಲ್ಲಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸುಷ್ಮಾ ಸ್ವರಾಜ್, ಅಮೆರಿಕಾದ ಶಿಕಾಗೋನಲ್ಲಿರುವ ದೂತಾವಾಸ ಕಚೇರಿಗೆ ಸೂಚನೆ ನೀಡಿದ್ದಾರೆ. ಸುಷ್ಮಾ ಸ್ವರಾಜ್ ಸೂಚನೆಯ ಮೆರೆಗೆ ರೋಹನ್ ಷಾ ತುರ್ತು ವೀಸಾ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಷ್ಮಾ ಸ್ವರಾಜ್ ಸೂಚನೆ ನೀಡಿದ ಕೆಲವೇ ಗಂಟೆಗಳಲ್ಲಿ ತುರ್ತು ವೀಸಾ ಪಡೆದ ರೋಹನ್ ಷಾ, ಸುಷ್ಮಾ ಸ್ವರಾಜ್ ಕಾರ್ಯದಕ್ಷತೆಗೆ ರೋಹನ್ ಷಾ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.